ಭಟ್ಕಳ: ತಾಲೂಕಿನ ಪುರವರ್ಗ ಪ್ರದೇಶದಲ್ಲಿ ಬೈಕ್‌ಗಳಿಗೆ ಬೆಂಕಿ ಹಚ್ಚುವ (bikes on fire) ಘಟನೆಗಳು ಹೆಚ್ಚುತ್ತಿದ್ದು, ಮತ್ತೊಮ್ಮೆ ಇದೇ ರೀತಿಯ ಕೃತ್ಯ ನಡೆದಿರುವುದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗುರುವಾರ ಮಧ್ಯರಾತ್ರಿ, ಪುರವರ್ಗ ೩ನೇ ಕ್ರಾಸ್‌ನ ಗಂಗಾವಳಿ ನಿವಾಸಿ ಅಬ್ದುಲ್ ವಾಹೀದ್ ಅವರ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿದ ಅಜ್ಞಾತರು, ಅಂಗಳದಲ್ಲಿ ನಿಲ್ಲಿಸಿದ್ದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ ಹಾಗೂ ಟಿವಿಎಸ್ ಅಪಾಚಿ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ (bikes on fire). ಪರಿಣಾಮ, ಎರಡೂ ವಾಹನಗಳು ಭಸ್ಮವಾಗಿದ್ದು, ಮನೆಯ ಅಂಗಳದ ತಗಡಿನ ಶೀಟ್ ಹಾಗೂ ಹಾಲ್ ಭಾಗಕ್ಕೂ ಹಾನಿಯಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿ, ಪಕ್ಕದ ಮನೆಯಲ್ಲಿ ವಾಸಿಸುವ ತೌಸಿಪ್ ಸಲಾವುದ್ದಿನ್ ಜಬಾಲಿ ಮತ್ತು ಸಾದ್ ಸಲಾವುದ್ದಿನ್ ಜಬಾಲಿ ಇವರ ಮೇಲೆ ದೂರುದಾರರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Municipal Council/ ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೆ

ಕಳೆದ ಜುಲೈ ೨೫ರಂದು ಇದೇ ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳವು ಮಾಡಿ ಪಕ್ಕದ ರಸ್ತೆಯಲ್ಲಿ ಬೆಂಕಿ ಹಚ್ಚಲಾಗಿತ್ತು. ಒಂದೇ ತಿಂಗಳಲ್ಲಿ ಈ ಮನೆಗೆ ಸೇರಿದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾದ ಘಟನೆ ಪುರವರ್ಗದಲ್ಲಿ ಆತಂಕ ಮತ್ತು ಸಂಶಯಕ್ಕೆಡೆ ಮಾಡಿದೆ. ಸುದ್ದಿ ತಿಳಿದು, ಉತ್ತರ ಕನ್ನಡ (Uttara Kannada) ಜಿಲ್ಲಾ ಎಸ್‌ಪಿ ದೀಪನ್ ಎಂ ಎನ್, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಎಂ, ಭಟ್ಕಳ (Bhatkal) ಡಿವೈಎಸ್ಪಿ ಮಹೇಶ್ ಹಾಗೂ ಸಿಪಿಐ ದಿವಾಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Life jacket/ 9 ಮೀನುಗಾರರ ಜೀವ ಉಳಿಸಿದ ಲೈಫ್ ಜಾಕೆಟ್