ಭಟ್ಕಳ: ತಾಯಿ-ತಂದೆಯರೊಂದಿಗೆ ಮಲಗಿದ್ದ ಪುಟ್ಟ ಮಗು ನಾಪತ್ತೆಯಾಗಿರುವ (missing) ಘಟನೆ ಮುರ್ಡೇಶ್ವರದಲ್ಲಿ (Murdeshwar) ಬೆಳಕಿಗೆ ಬಂದಿದೆ. ಮಗುವನ್ನು ಯಾರೋ ಅಪಹರಿಸಿರುವ ಶಂಕೆಯಲ್ಲಿ ಮುರ್ಡೇಶ್ವರ (Murudeshwara) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಹಾರಾಷ್ಟ್ರದ (Maharashtra) ಸೊಲ್ಲಾಪುರ (Solapur) ನಿವಾಸಿ ಶೋಭಾ ಕುಮಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಶೋಭಾ ಕುಮಾರಿ ಹಾಗೂ ಅವರ ಕುಟುಂಬ ಗುಜರಿ ವಸ್ತು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದು, ಕೆಲಸದ ನಿಮಿತ್ತ ಊರು ಊರು ಸುತ್ತುತ್ತಿದ್ದಾರೆ. ಸುಮಾರು ಎರಡು ವಾರಗಳ ಹಿಂದೆ ಮುರ್ಡೇಶ್ವರಕ್ಕೆ ಬಂದಿದ್ದ ಕುಟುಂಬವು ರೈಲ್ವೆ ನಿಲ್ದಾಣದ (railway station) ಸಮೀಪದ ರಸ್ತೆಯ ಬದಿಯಲ್ಲಿರುವ ಗೂಡಂಗಡಿಯ ಮುಂದೆ ತಂಗಿತ್ತು. ರಾತ್ರಿ ಊಟ ಮುಗಿಸಿ ಶೋಭಾ ಕುಮಾರಿ, ಅವರ ಪತಿ ಹಾಗೂ ಮಗು ಅಲ್ಲೇ ಮಲಗಿದ್ದರು. ಮುಂಜಾನೆ ಸುಮಾರು ೩ ಗಂಟೆ ವೇಳೆ ಎಚ್ಚರವಾದಾಗ ಮಗು ತಮ್ಮ ಮಧ್ಯದಲ್ಲೇ ಮಲಗಿರುವುದನ್ನು ಅವರು ಗಮನಿಸಿದ್ದಾರೆ. ಆದರೆ ಬೆಳಿಗ್ಗೆ ಸುಮಾರು 6 ಗಂಟೆಗೆ ಮತ್ತೆ ಎಚ್ಚರವಾದಾಗ ಮಗು ಕಾಣೆಯಾಗಿರುವುದು (missing) ತಿಳಿದು ಬಂದಿದೆ.
Woman dies/ ಬಾವಿಗೆ ಬಿದ್ದು ಮಹಿಳೆ ಸಾವು
ತಕ್ಷಣ ಸುತ್ತಮುತ್ತಲಿನ ಪ್ರದೇಶದಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ತಾವು ಗಾಢ ನಿದ್ರೆಯಲ್ಲಿದ್ದ ವೇಳೆ ಅಪರಿಚಿತರು ಮಗುವನ್ನು ಅಪಹರಿಸಿರಬಹುದು ಎಂದು ಶಂಕಿಸಿ ಶೋಭಾ ಕುಮಾರಿ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು ನಾಪತ್ತೆಯಾದ ಮಗುವಿನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
BJP protest/ ಮುರಿನಕಟ್ಟೆ ಮರು ನಿರ್ಮಾಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ



