ಭಟ್ಕಳ: ಹಿಂದೂ ಸಂಘಟನೆ ಒಕ್ಕೂಟದ ವತಿಯಿಂದ ಧಾರ್ಮಿಕ ಶ್ರದ್ದಾ ಕೇಂದ್ರ, ಶಕ್ತಿಪೀಠ ಮುರಿನಕಟ್ಟೆ ಧ್ವಂಸ ಖಂಡಿಸಿ ಜೂನ್ ೫ರಂದು ಶುಕ್ರವಾರ ಮಧ್ಯಾಹ್ನ ೧ ಘಂಟೆಯಿಂದ ಸ್ವಯಂಪ್ರೇರಿತ ಭಟ್ಕಳ ಬಂದ್ (Bhatkal bandh) ಕರೆ ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಧ್ಯಾಹ್ನ ೩ ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಹೂವಿನ ಮಾರುಕಟ್ಟೆ, ಮಾರಿಕಾಂಬಾ ದೇವಸ್ಥಾನ, ಹಳೆಯ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಮುಖ್ಯ ವೃತ್ತ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಸಾಗಲಿದೆ.
missing/ ಮುರ್ಡೇಶ್ವರದಲ್ಲಿ ತಾಯಿ-ತಂದೆ ಜೊತೆ ಮಲಗಿದ್ದ ಮಗು ನಾಪತ್ತೆ
ಮುರಿನಕಟ್ಟೆ ನಿರ್ಮಾಣ ತಾಲೂಕಾಡಳಿತ ಮಾಡಬೇಕು. ಇಲ್ಲವೆಂದರೆ ನಾವೇ ಮುರಿನಕಟ್ಟೆಯನ್ನು ಕಟ್ಟುತ್ತೇವೆ ಎಂಬುದು ಹಿಂದೂ ಸಂಘಟನೆ ಒಕ್ಕೂಟದ ಆಗ್ರಹವಾಗಿದೆ. ಎಲ್ಲಾ ಸ್ವಾಭಿಮಾನಿ ಹಿಂದುಗಳು ಭಟ್ಕಳ ಬಂದಗೆ (Bhatkal bandh) ಬೆಂಬಲಿಸಿ, ದೌರ್ಜನ್ಯ ಖಂಡಿಸುವಂತೆ ಆಯೋಜಕರು ವಿನಂತಿಸಿದ್ದಾರೆ.
Woman dies/ ಬಾವಿಗೆ ಬಿದ್ದು ಮಹಿಳೆ ಸಾವು



