ಭಟ್ಕಳ ಡೈರಿ ವರದಿ

ಭಟ್ಕಳ: ಗೋಮಾತೆಯ ಮಹತ್ವವನ್ನು ಸಾರುವ ಹಾಗೂ ಧರ್ಮ, ಸಂಸ್ಕೃತಿ ಮತ್ತು ಗೋಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಜಾಲಿಯಲ್ಲಿ ನವೆಂಬರ್ ೨೨ರಂದು ಗೋ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವ ಹಿಂದೂ ಪರಿಷತ್‌ನ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೋಮಾತೆಯ ಪೂಜೆ ನೆರವೇರಿಸುವ ಮೂಲಕ ಗೋಮಾತೆಯ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತದೆ.

ಕಾರ್ಯಕ್ರಮವು ನವೆಂಬರ್ ೨೨ರ ಭಾನುವಾರ ಸಂಜೆ ೪ ಗಂಟೆಗೆ ಜಾಲಿಯ ಶ್ರೀ ಸಿದ್ಧಿವಿನಾಯಕ ಯುವಕ ಸಂಘದ ಸ್ಥಳದಲ್ಲಿ ನಡೆಯಲಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಗೋ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳ ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ

ಭಟ್ಕಳದ ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಐದು ವರ್ಷಗಳ ಸಂಶೋಧನೆಗೆ ಮನ್ನಣೆ