ಭಟ್ಕಳ ಡೈರಿ ವರದಿ

ಮುರ್ಡೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಭಟ್ಕಳ ತಾಲೂಕಿನ ೩೮ ವರ್ಷದ ವ್ಯಕ್ತಿಯೊಬ್ಬರನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಟ್ಕಳ ತಾಲೂಕಿನ ವೆಂಕಟೇಶ ತಂದೆ ಗಿರಿಯಾ ನಾಯ್ಕ (೩೮) ಪ್ರಕರಣದ ಆರೋಪಿಯಾಗಿದ್ದಾರೆ.

ನವೆಂಬರ್ ೨೪ರಂದು ಬೆಳಿಗ್ಗೆ ಸುಮಾರು ೧೧ ಗಂಟೆಗೆ ಮುರ್ಡೇಶ್ವರದ ಬಸ್ತಿಮಕ್ಕಿ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮುರ್ಡೇಶ್ವರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ಲೋಕನಾಥ ರಾಠೋಡ ಅವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಆರೋಪಿಯು ಅಂಕೆ ಸಂಖ್ಯೆಗಳ ಮೇಲೆ ಹಣ ಪಂಥವಾಗಿ ಕಟ್ಟಿಸಿಕೊಂಡು, ಒಂದು ರೂಪಾಯಿಗೆ ೮೦ ರೂಪಾಯಿ ನೀಡುವ ಆಮಿಷವೊಡ್ಡಿ ಜೂಜಾಟ ಆಡಿಸುತ್ತಿದ್ದ ಎನ್ನಲಾಗಿದೆ. ದಾಳಿಯ ವೇಳೆ ಆರೋಪಿಯಿಂದ ೪೯೦ ರೂಪಾಯಿ ನಗದು, ಒಂದು ಓಸಿ ಮಟ್ಕಾ ಜೂಜಾಟದ ಚೀಟಿ ಹಾಗೂ ನೀಲಿ ಇಂಕಿನ ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಎನ್‌ಸಿ ಸಂಖ್ಯೆ ೧೩೯/೨೦೨೬ರ ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ ೭೮(೩)ರಂತೆ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದ ಬಳಿಕ ಪೊಲೀಸರು ಪ್ರಕರಣವನ್ನು ಎಫ್‌ಐಆರ್ ಆಗಿ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಮಾವಿನಕುರ್ವೆಯ ಸುರೇಶ ಬಸವ ಖಾರ್ವಿಗೆ ಎರಡು ರಾಜ್ಯ ಮಟ್ಟದ ಪ್ರಶಸ್ತಿಗಳ ಗರಿ

Breaking news/ ಭಟ್ಕಳ ಹುಯ್ಲಮಡಿ ರಸ್ತೆಯಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು