ಭಟ್ಕಳ ಡೈರಿ ವರದಿ

ಭಟ್ಕಳ: ಜಾಲಿಕೋಡಿ ಇಳಿಜಾರಿನ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಲಾದ ಆಟೋರಿಕ್ಷಾ ಪಲ್ಟಿಯಾದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನವೆಂಬರ್ ೧೬ರಂದು ನಡೆದಿದೆ. ಘಟನೆಯಲ್ಲಿ ಅಂಕಿತಾ ಖಾರ್ವಿ ಮತ್ತು ಅಂಜಲಿ ಖಾರ್ವಿ ಗಾಯಗೊಂಡಿದ್ದಾರೆ. ಅಂಕಿತಾ ಅವರ ಎಡಗಾಲಿನ ಮೊಣಕಾಲಿಗೆ ಹಾಗೂ ಅಂಜಲಿ ಅವರ ಎಡಗಾಲಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನವೆಂಬರ್ ೧೬ರಂದು ಸಂಜೆ ಸುಮಾರು ೫.೪೦ರ ವೇಳೆಗೆ ಕರೀಕಲ್ ಆಸ್ಪತ್ರೆ ಕಡೆಯಿಂದ ಜಾಲಿಕೋಡಿ ಕಡೆಗೆ ಆಟೋರಿಕ್ಷಾ ತೆರಳುತ್ತಿತ್ತು. ಈ ವೇಳೆ ಜಾಲಿಕೋಡಿ ಇಳಿಜಾರಿನ ರಸ್ತೆಯಲ್ಲಿ ಚಾಲಕ ಅಬ್ದುಲ್ ಖಾದರ ತಂದೆ ಬಾಬಾಸಾಬ ಶೇಖ್ ಆಟೋರಿಕ್ಷಾವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಲ್ಟಿ ಬೀಳುವಂತೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಜಾಲಿಕೋಡಿ ನಿವಾಸಿ, ವಿದ್ಯಾರ್ಥಿ ಅಜಯ ಖಾರ್ವಿ ಅವರು ನವೆಂಬರ್ ೧೮ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಗಣಕೀಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಅಕ್ರಮವಾಗಿ ಕಟ್ಟಿಹಾಕಿದ್ದ ಮೂರು ಹೋರಿ ರಕ್ಷಣೆ; ಮಾಂಸ ಕತ್ತರಿಸುವ ಉಪಕರಣಗಳು ವಶಕ್ಕೆ

ತಾಂತ್ರಿಕ ಕೌಶಲ ಬೆಳೆಸಲು ಎಐಟಿಎಂನಿಂದ ಹೊಸ ಪ್ರಯತ್ನ