ಭಟ್ಕಳ: ದುಡುಕಿನ ಹಾಗೂ ನಿರ್ಲಕ್ಷ್ಯತನದ ಬೈಕ್  ಚಾಲನೆಯಿಂದ ಮಹಿಳೆಯೊಬ್ಬರು ಗಾಯಗೊಂಡ (Woman injured) ಘಟನೆ ತಾಲೂಕಿನ ಹಾಡುವಳ್ಳಿ ಭಾಗದಲ್ಲಿ ನಡೆದಿದೆ. ಅರವಕ್ಕಿ ನಿವಾಸಿ ಗೀತಾ ಗೋಮಾ ಮರಾಠ (48) ಗಾಯಗೊಂಡವರು. ರಸ್ತೆ ದಾಟುತ್ತಿರುವ ವೇಳೆ ಬೈಕ್ ಸವಾರನೊಬ್ಬ ಅಜಾಗರೂಕವಾಗಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೂರುದಾರ ಗೋಮಾ ಮರಾಠ (49) ನೀಡಿದ ಮಾಹಿತಿಯಂತೆ, ಬೈಲೂರು ನಿವಾಸಿ ಗಿರೀಶ (28) ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನೆಯ ಪರಿಣಾಮವಾಗಿ ಮಹಿಳೆಗೆ ತಲೆ ಹಾಗೂ ದೇಹಕ್ಕೆ ಗಾಯಗಳಾಗಿದ್ದು (Woman injured), ಬೈಕ್ ಸವಾರನೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ. ಈ ಸಂಬಂಧ  ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Murdeshwar/ ಮುರ್ಡೇಶ್ವರಕ್ಕೆ ಲಯನ್ಸ್ ಗವರ್ನರ್ ಭೇಟಿ: ಪ್ರಶಸ್ತಿ ಪ್ರದಾನ, ಸನ್ಮಾನ