ಭಟ್ಕಳ: ಮುರ್ಡೇಶ್ವರ (Murdeshwar) ಲಯನ್ಸ್ ಕ್ಲಬ್ (Lions club) ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಲಯನ್ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕ್ಲಬ್ ಆಗಿ ಗುರುತಿಸಿಕೊಂಡಿದೆ. ಪರಿಸರ ಜಾಗೃತಿ, ಯುವ ಸಬಲೀಕರಣ, ಬಡತನ ನಿರ್ಮೂಲನೆ, ಮಕ್ಕಳ ಕ್ಯಾನ್ಸರ್ ನೆರವು, ಮಧುಮೇಹ ಜಾಗೃತಿ, ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕ್ಲಬ್ ಮುಂಚೂಣಿಯಲ್ಲಿದೆ. ಕೇವಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ 14 ಸೇವಾ ಚಟುವಟಿಕೆಗಳೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ’ ಎಂದು ಲಯನ್ ೩೧೮ಬಿ ಜಿಲ್ಲೆಯ ಗವರ್ನರ್ (Lions Governor) ಆಗಿರುವ ಗೋವಾದ (Goa) ಜೈ ಅಮೋಲ್ ನಾಯಕ್ ಅವರು ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರ್ನಾಟಕ (Karnataka) ಮತ್ತು ಗೋವಾ (Goa) ರಾಜ್ಯಗಳನ್ನು ಒಳಗೊಂಡ ೧೧೦ ಕ್ಲಬ್‌ಗಳನ್ನೊಳಗೊಂಡ ಲಯನ್ ಜಿಲ್ಲೆಯ ಗವರ್ನರ್ ಆಗಿರುವ ಅವರು, ಶಿರಾಲಿಯ ಶ್ರೀದೇವಿ ಹೆರಿಟೇಜ್ ಸಭಾಂಗಣದಲ್ಲಿ ಮುರ್ಡೇಶ್ವರ (Murdeshwar) ಲಯನ್ಸ್ ಕ್ಲಬ್ ಗೆ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕ್ಲಬ್ ಸೇವಾ ಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದರು.
vardhanthi utsava/ ಶ್ರೀ ವಲ್ಮೀಕ ನಾಗ-ಚೌಡೇಶ್ವರಿ ದೇವಸ್ಥಾನದ ೫ನೇ ವರ್ಷದ ವರ್ಧಂತಿ ಉತ್ಸವ ಏ ೧ರಂದು
ಶಿಕ್ಷಕ ಶ್ರೀಧರ ಎಂ ನಾಯ್ಕರವರ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ ಅವರಿಗೆ ವಾಜಂತ್ರಿ ಅವಾರ್ಡ್ ಪ್ರದಾನ ಮಾಡಲಾಯಿತು. ಸರಕಾರಿ ಪ್ರೌಢಶಾಲೆ ಬೆಳ್ಕೆಯ ಶಿಕ್ಷಕಿ ರಜನಿ ಶೆಟ್ಟಿಯವರ ಶ್ರೇಷ್ಠ ಸೇವೆಯನ್ನು ಗುರುತಿಸಿ ಉಡುಪ ಅವಾರ್ಡ್ ನೀಡಿ ಗೌರವಿಸಲಾಯಿತು. ಕರೂರು ಶಾಲೆಗೆ ಜಮಖಾನಾ, ಕೆಪಿಎಸ್ ಬೈಲೂರು ಶಾಲೆಗೆ ವಾಟರ್ ಫಿಲ್ಟರ್, ಕೆರೆಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ ೨೦೦ ಕ್ಯಾಪ್ ಗಳು ಹಾಗೂ ಸರ್ವೋದಯ ಶಾಲೆಗೆ ಸೌಂಡ್ ಸಿಸ್ಟಮ್ ಅನ್ನು ದೇಣಿಗೆಯಾಗಿ ನೀಡಲಾಯಿತು.
autorickshaws/ ಭಟ್ಕಳದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತ: ರಸ್ತೆಗಿಳಿಯದ ಆಟೋರಿಕ್ಷಾಗಳು
ಮುಖ್ಯಮಂತ್ರಿ ಪದಕ ವಿಜೇತ ಅರಣ್ಯಾಧಿಕಾರಿ ಪ್ರದೀಪ ನಾಯ್ಕ, ನಿವೃತ್ತ ಭಾರತೀಯ ಸೈನಿಕ ಜನಾರ್ಧನ ದೇವಾಡಿಗ ಹಾಗೂ ಸ್ನೇಹ ವಿಶೇಷ ಶಾಲೆಯ ಶಿಕ್ಷಕಿ ಮಾಲತಿ ಉದ್ಯಾವರರವರನ್ನು ಸನ್ಮಾನಿಸಲಾಯಿತು.
women’s adoration/ ಜಾಲಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿದ ಸ್ತ್ರೀ ನಮನ ಕಾರ್ಯಕ್ರಮ
ವೇದಿಕೆಯಲ್ಲಿ ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಕಿರಣ ಎಸ್ ಕಾಯ್ಕಿಣಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಕೀರ್ತಿ ನಾಯ್ಕ, ರೀಜನ್ ಚೇರಪರ್ಸನ್ ರಾಜೇಶ್ ಸಾಲೇಹಿತ್ತಲ್, ಜೋನ್ ಚೇರ್ ಪರ್ಸನ್ ಮಂಗಲಾ ಕುಚಿನಾಡ್, ಕಾರ್ಯದರ್ಶಿ ನಾಗೇಶ ಮಡಿವಾಳ ಹಾಗೂ ಕೋಶಾಧ್ಯಕ್ಷ ಎಂ ವಿ ಹೆಗಡೆ ಉಪಸ್ಥಿತರಿದ್ದರು.



