ಭಟ್ಕಳ: ಕರಾವಳಿ ಜಿಲ್ಲೆಗಳ (coastal districts) ಅತಿ ದೊಡ್ಡ ಹಾಗೂ ಖ್ಯಾತ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ (Sodigadde Jathre) ಶುಕ್ರವಾರ ಭಕ್ತಿಭಾವದಿಂದ ಆರಂಭಗೊಂಡಿದೆ. ೯ ದಿನಗಳ ಕಾಲ ನಡೆಯುವ ಈ ಜಾತ್ರೆ, ಹಾಲಹಬ್ಬದ ಸೇವೆಯೊಂದಿಗೆ ಅದ್ದೂರಿಯಾಗಿ ಚಾಲನೆ ಪಡೆದಿತು.
ಸೋಡಿಗದ್ದೆ ಜಾತ್ರೆಯ ಮೊದಲ ದಿನದ ವಿಡಿಯೋವನ್ನು ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಹಾಸತಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನ–ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಸ್ಥಳೀಯರೊಂದಿಗೆ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi) ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಸೋಡಿಗದ್ದೆ ಜಾತ್ರೆಯಲ್ಲಿ (Sodigadde Jathre) ಪಾಲ್ಗೊಂಡರು. ಜಾತ್ರೆಯ ಮೊದಲ ದಿನ ಮಧ್ಯಾಹ್ನ ದೇವಸ್ಥಾನ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು.
ಇದನ್ನು ಓದಿ: Haluhabba/ ಹಾಲಾಡಿಯ ಆದಿ ಮರಳುಚಿಕ್ಕು ದೈವಸ್ಥಾನದಲ್ಲಿ ಹಾಲುಹಬ್ಬ, ಗೆಂಡೋತ್ಸವ ಸಂಪನ್ನ
ಜಾತ್ರೆಯ ಅಂಗವಾಗಿ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಂಡಸೇವೆ ನಡೆಯಲಿದೆ. ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಮಹಾಸತಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ. ತುಲಾಭಾರ ಸೇವೆಯೂ ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಜಾತ್ರೆ ಜನವರಿ 31ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಇದನ್ನು ಓದಿ: Lawyer’s car/ ವಕೀಲನ ಕಾರಿಗೆ ಲಾರಿ ಡಿಕ್ಕಿ
ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಾತ್ರೆಯ ಶಾಂತಿ ಮತ್ತು ಸುವ್ಯವಸ್ಥೆಗೆ ದೇವಸ್ಥಾನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನು ಓದಿ: Forest watchman/ ಬೈಕಿನಿಂದ ಬಿದ್ದು ಅರಣ್ಯ ಇಲಾಖೆಯ ವಾಚ್ ಮ್ಯಾನ್ ಸಾವು



