ಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದಲ್ಲಿ ಜನವರಿ 21 ಮತ್ತು 22 ರಂದು ಹಾಲುಹಬ್ಬ (Haluhabba) ಹಾಗೂ ಗೆಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನರು ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತನ್ನಿಮಿತ್ತ (Haluhabba) ಜ 20ರಂದು ಮಂಗಳವಾರ ಸಂಜೆ ಗಂಟೆ 6ರಿಂದ ಶ್ರೀ ಆದಿಮರಳುಚಿಕ್ಕು ದೈವಕ್ಕೆ ಪಂಚವಿಂಶತಿ ಕಲಶ ಸ್ಥಾಪನಾಪೂರ್ವಕ ಪ್ರಧಾನ ಕಲಾತತ್ವ ಹೋಮ ನಡೆಯಿತು.  ಜ 21ರಂದು ಬುಧವಾರ ಬೆಳಿಗ್ಗೆ ಗಂಟೆ 9ರಿಂದ ಶ್ರೀ ನಾಗ ದೇವರಿಗೆ ನವಕ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಶ್ರೀ ಆದಿಮರಳುಚಿಕ್ಕು ದೈವಕ್ಕೆ ಕಲಶಾಭಿಷೇಕಪೂರ್ವಕ ಮಹಾಪೂಜೆ ಜರುಗಿತು. ಮಧ್ಯಾಹ್ನ “ಅನ್ನಸಂತರ್ಪಣೆ” ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಗಂಟೆ 12ಕ್ಕೆ ಗೆಂಡಸೇವೆ ನಡೆಯಿತು.

ಇದನ್ನು ಓದಿ: Lawyer’s car/ ವಕೀಲನ ಕಾರಿಗೆ ಲಾರಿ ಡಿಕ್ಕಿ

ಜ 22ರಂದು ಗುರುವಾರ ಬೆಳಿಗ್ಗೆ 3 ಗಂಟೆಗೆ ಸ್ವಾಮಿ ಸೇವೆ, ನಾಗನಿಗೆ ಹಾಲಿಟ್ಟು ಸೇವೆ, ಬೆಳಿಗ್ಗೆ 4 ಗಂಟೆಗೆ ಡಮರು ಸೇವೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಡಾ ಶ್ರೀನಿವಾಸ ಶೆಟ್ಟಿ, ಹಾಲಾಡಿ ಮತ್ತು ಕಾರ್ಯದರ್ಶಿ  ಉದಯ ಕುಮಾರ ಶೆಟ್ಟಿ, ಕವನ ನರಸಿಂಹ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನು ಓದಿ: missing/ ಮೊಬೈಲ್ ಮನೆಯಲ್ಲಿ ಬಿಟ್ಟು ಕಾಣೆಯಾದ ಯುವಕ 

ಉತ್ಸವ ಪ್ರಯುಕ್ತ ಜನವರಿ ೨೧ರಂದು ರಾತ್ರಿ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನಗೊಂಡಿತು. ಮಂಜೇಶ್ವರದ ಶಾರದಾ ಅರ್ಟ್ಸ್ ತಂಡದ ಐಸಿರಿ ಕಲಾವಿದರು ಅಭಿನಯಿಸಿದರು. ‘ಸು ಫ್ರಮ್ ಸೋ’ ಚಲನಚಿತ್ರ ನಿರ್ದೇಶಕ ಜೆ ಪಿ ತುಮಿನಾಡು ಮತ್ತು ಮೈಮ್ ರಾಮದಾಸ್ ಅವರ ನಿರ್ದೇಶನದ ಈ ನಾಟಕವನ್ನು ಹಾಲಾಡಿ ಮೂಲದ ಹೋಟೆಲ್ ಉದ್ಯಮಿ ಕವನ ನರಸಿಂಹ ಶೆಟ್ಟಿ ಆಯೋಜಿಸಿದ್ದರು. ಇದಕ್ಕೂ ಮೊದಲು ರಾತ್ರಿ 7 ಗಂಟೆಯಿಂದ ಬಿದ್ದರ್‌ ಕಟ್ಟೆ ಹವ್ಯಾಸಿ ಕಲಾವಿದರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತು.

ಇದನ್ನು ಓದಿ: missing/ ಮೊಬೈಲ್ ಮನೆಯಲ್ಲಿ ಬಿಟ್ಟು ಕಾಣೆಯಾದ ಯುವಕ