ಭಟ್ಕಳ: ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಟ್ಕಳ (Bhatkal) ತಾಲೂಕಿನ ಕೆ ಪಿ ಎಸ್ (KPS) ತೆರ್ನಮಕ್ಕಿ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗಳನ್ನು ಮಾಡಿರುತ್ತಾರೆ (SSLC result).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಶಾಲೆಯ  ಸಾನಿಕಾ ಬೈಲೂರು ೬೨೧ ಅಂಕಗಳನ್ನು ಪಡೆದು ರಾಜ್ಯ ಕ್ಕೆ ೫ನೇ ಸ್ಥಾನ, ಉತ್ತರ ಕನ್ನಡ (Uttara Kannada) ಜಿಲ್ಲೆ ಮತ್ತು ಭಟ್ಕಳ (Bhatkal) ತಾಲೂಕಿಗೆ ಪ್ರಥಮ ಸ್ಥಾನ   ಪಡೆದಿದ್ದಾಳೆ. ವರ್ಷಿತಾ ನಾಯ್ಕ ೬೨೦  ಅಂಕಗಳೊಂದಿಗೆ ಪಡೆದು ‌ರಾಜ್ಯಕ್ಕೆ ೬ನೇ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆ ಮತ್ತು ಭಟ್ಕಳ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಯೋಗೇಂದ್ರ ನಾಯ್ಕ ೬೧೮ ಅಂಕಗಳನ್ನು ಪಡೆದು, ರಾಜ್ಯಕ್ಕೆ ೮ನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ ಮತ್ತು ಭಟ್ಕಳ ತಾಲೂಕಿಗೆ ಚತುರ್ಥ ಸ್ಥಾನವನ್ನು ಪಡೆದಿರುತ್ತಾನೆ.

SSLC result/ ಭಟ್ಕಳದ ಚೆನ್ನಮ್ಮ ವಸತಿ ಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ ೧೦೦ ಸಾಧನೆ

೨೨ ವಿದ್ಯಾರ್ಥಿಗಳು ಶೇಕಡಾ ೯೦ಕ್ಕಿಂತ ಹೆಚ್ಚು ಅಂಕವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲೆಯ ಗುಣಾತ್ಮಕ ಫಲಿತಾಂಶವು ೯೦.೬೪% ಆಗಿರುತ್ತದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಉಪಪ್ರಾಂಶುಪಾಲ, ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಹಾಗೂ ಪೋಷಕರು ಶ್ಲಾಘಿಸಿ ಅಭಿನಂದಿಸಿರುತ್ತಾರೆ.

Shiksha Award/ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ ಹೆಮ್ಮೆಯ ” ಶಿಕ್ಷಾ ಪ್ರಶಸ್ತಿ -೨೦೨೬” ಪ್ರದಾನ