ಭಟ್ಕಳ: ತಾಲೂಕಿನ ತೆಂಗಿನಗುಂಡಿ ರಸ್ತೆಯಲ್ಲಿ ಜಾಮಿಯಾಬಾದ್ ಸಮೀಪ ಮೋಟಾರು ಸೈಕಲ್‌ ಡಿಕ್ಕಿಯಾಗಿ (Bike collision) ಹಿಂಬದಿ ಸವಾರಗೆ ಗಾಯವಾದ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂದರದ ಮಾವಿನಕುರ್ವೆ ನಿವಾಸಿ ನಾಗರಾಜ ತಂದೆ ಬಸವ ಖಾರ್ವಿ ಅವರು ಭಟ್ಕಳದಿಂದ (bhatkal) ತೆಂಗಿನಗುಂಡಿ ಕಡೆಗೆ ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

SSLC result/ ಕೆಪಿಎಸ್ ತೆರ್ನಮಕ್ಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ೩  ರ‍್ಯಾಂಕ್

ಜಾಮಿಯಾಬಾದ್ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ತೆಂಗಿನಗುಂಡಿ ನಿವಾಸಿ ಅಬುತಾಹಿರ್ ಉಸ್ಮಾನಿ ಅವರ ಬೈಕ್‌ ಹಿಂಬದಿಯಲ್ಲಿ ಅವರ ಸಂಬಂಧಿ ರೆಹಮತುಲ್ಲಾ ತಂದೆ ಮೊಹಮ್ಮದ್ ಉಸ್ಮಾನಿ ಕುಳಿತಿದ್ದರು. ತಿರುವು ಪಡೆಯುವ ವೇಳೆ ನಾಗರಾಜ ಅವರ ಬೈಕ್‌ ಡಿಕ್ಕಿ ಹೊಡೆದ (Bike collision) ಪರಿಣಾಮ ರೆಹಮತುಲ್ಲಾ ಕೆಳಗೆ ಬಿದ್ದು ಬಲಗಾಲಿಗೆ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

SSLC result/ ಭಟ್ಕಳದ ಚೆನ್ನಮ್ಮ ವಸತಿ ಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ ೧೦೦ ಸಾಧನೆ