ಭಟ್ಕಳ: ತಾಲೂಕಿನ ಶೇಡಬರಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ ೧೦೦ ಸಾಧನೆ ಮಾಡಿದೆ (SSLC result).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಾಲೆಯ ವಿದ್ಯಾರ್ಥಿಗಳ ಪ್ರಗತಿ, ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರದಿಂದ ಪರೀಕ್ಷೆಗೆ ಕುಳಿತ ಎಲ್ಲಾ ೫೦ ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇಕಡಾ ೧೦೦ ಫಲಿತಾಂಶ ದಾಖಲಿಸಿದೆ (SSLC result). ೩೬ ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದು, ಉಳಿದ ೧೪ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ೧೯ ವಿದ್ಯಾರ್ಥಿನಿಯರು A+, ೨೭ ವಿದ್ಯಾರ್ಥಿನಿಯರು A ಮತ್ತು ಮೂವರು B+ ಪಡೆದಿದ್ದಾರೆ.
Pro-Kabaddi/ ಮೇ ೯–೧೦ರಂದು ಭಟ್ಕಳದಲ್ಲಿ ಪ್ರೋ-ಕಬಡ್ಡಿ ಮಾದರಿಯ ಜಿಲ್ಲಾ ಮಟ್ಟದ ಫೆಡರೇಶನ್ ಕಪ್ ಪಂದ್ಯಾವಳಿ
ಶಾಲೆಯ ವಿದ್ಯಾರ್ಥಿನಿ ಮೇಘಾ ಗೊಂಡ ೬೧೬ (೯೮.೫೬%) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಉಷಾ ಗೊಂಡ ೬೧೫ (೯೮.೪%) ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ಧನ್ಯ ವಿ ನಾಯ್ಕ ೬೦೪ (೯೬.೬೪%) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
Shiksha Award/ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ ಹೆಮ್ಮೆಯ ” ಶಿಕ್ಷಾ ಪ್ರಶಸ್ತಿ -೨೦೨೬” ಪ್ರದಾನ



