ಭಟ್ಕಳ: ನಗರದ ಪ್ರತಿಷ್ಠಿತ ಐಸಿಎಸ್ಇ ಪಠ್ಯಕ್ರಮದ ವಿದ್ಯಾಂಜಲಿ ಶಾಲೆಯು (vidyanjali School) ದಕ್ಷಿಣ ಭಾರತದ ಸುಮಾರು ೨೦೦೦ಕ್ಕೂ ಹೆಚ್ಚು ಲೀಡ್ ಸಂಸ್ಥೆಯ ಸಹಭಾಗಿತ್ವದ ಶಾಲೆಗಳ ವಿನೂತನ ಟೆಕ್‌ಬುಕ್ ಶಿಕ್ಷಣ ವಿಭಾಗದಲ್ಲಿ “ಶಿಕ್ಷಾ ಪ್ರಶಸ್ತಿ -೨೦೨೬” (Shiksha Award) ಪಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಪ್ರತಿಷ್ಠಿತ ಪ್ರಶಸ್ತಿ, ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಯ ನವೀನತೆ ಮತ್ತು ಅತ್ಯುತ್ತಮ ಬದ್ಧತೆ, ಆಧುನಿಕ ತಂತ್ರಜ್ಞಾನ ಆಧಾರಿತ ಪಠ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಪೂರ್ಣ ಶಾಲಾ ಸಮುದಾಯದ ಪರಿಶ್ರಮ ಮತ್ತು ಸಮರ್ಪಣೆಯ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ.

bulls rescued/ ಭಟ್ಕಳದಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತು ರಕ್ಷಣೆ

ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕಾಮತ ಹಾಗೂ ಶಾಲೆಯ ಲೀಡ್ ಸಂಯೋಜಕಿ ಗೀತಾ ನಾಯ್ಕ ಅವರು ಈ ಪ್ರಶಸ್ತಿಯನ್ನು (Shiksha Award) ಹೈದರಾಬಾದಿನಲ್ಲಿ (Hyderabad) ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು. ಇದು ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ ಪ್ರಸ್ತುತ ೨೦೨೬ನೇ ಸಾಲಿನಲ್ಲಿ ದೊರೆತ ಎರಡನೇ ರಾಷ್ಟ್ರೀಯ ಮಟ್ಟದ ಗೌರವವಾಗಿದೆ.

camels transporting/ ೮ ಒಂಟೆ ಸಾಗಿಸುತ್ತಿದ್ದ ಮೂವರ ಬಂಧನ