ಭಟ್ಕಳ ಡೈರಿ ವರದಿ
ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕ್ರಿಕೆಟ್ ತಂಡಕ್ಕೆ ಭಟ್ಕಳ ತಾಲೂಕಿನ ಐವರು ಯುವ ಕ್ರಿಕೆಟಿಗರು ಆಯ್ಕೆಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಭಟ್ಕಳದ ಪ್ರತಿಭೆ ಮತ್ತೊಮ್ಮೆ ಗುರುತಿಸಿಕೊಂಡಿದೆ. ಆಯ್ಕೆಯಾದ ಐವರಲ್ಲಿ ನಾಲ್ವರು ಅಂಜುಮನ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಮುರುಡೇಶ್ವರದ ಬೀನಾ ವೈದ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಅಂಜುಮನ್ ಸಂಸ್ಥೆಗಳ ನಾಲ್ವರಲ್ಲಿ ಮೂವರು AIMCA ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬರು ಅಂಜುಮನ್ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ಧಾರವಾಡದಲ್ಲಿ ಮೂರು ದಿನಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ೨೨೦ ಕಾಲೇಜುಗಳಿಂದ ೧೧೬ ಆಟಗಾರರು ಭಾಗವಹಿಸಿದ್ದರು. ವಿವಿಧ ಹಂತಗಳ ಪರಿಶೀಲನೆ ಮತ್ತು ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅಂತಿಮವಾಗಿ ೧೮ ಆಟಗಾರರನ್ನು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾದ ಐವರು:
ಸಾಹಿಲ್ ಪಠಾಣ್ – ರಫೀಕ್ ಪಠಾಣ್ ಅವರ ಪುತ್ರ. AIMCAಯಲ್ಲಿ ದ್ವಿತೀಯ ವರ್ಷದ BBA ವಿದ್ಯಾರ್ಥಿ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿದ್ದಾರೆ.
ಜಾಫರ್ ಜುಮಾನ್ ಜುಶಿದ್ದಿ – ಜಮೀಲ್ ಅಹ್ಮದ್ ಜುಶಿದ್ದಿ ಅವರ ಪುತ್ರ. ಅಂಜುಮನ್‌ನಲ್ಲಿ ಮೂರನೇ ವರ್ಷದ BBA ವಿದ್ಯಾರ್ಥಿ. ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.
ಐಮಾನ್ ಮುಲ್ಲಾ – ರಫೀಕ್ ಮುಲ್ಲಾ ಅವರ ಪುತ್ರ. AIMCAಯಲ್ಲಿ ದ್ವಿತೀಯ ವರ್ಷದ BBA ವಿದ್ಯಾರ್ಥಿ. ಬ್ಯಾಟರ್ ಆಗಿದ್ದಾರೆ.
ಮೊಹಮ್ಮದ್ ಯಹ್ಯಾ ಪಿಲ್ಲೂರು – ಅಂಜುಮನ್ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ BCom ವಿದ್ಯಾರ್ಥಿ. ಆಲ್‌ರೌಂಡರ್ ಆಗಿದ್ದಾರೆ.
ಅರ್ಸಲಾನ್ ಪೈಲಟ್ – ಆದಂ ಪೈಲಟ್ ಅವರ ಪುತ್ರ. ಮುರುಡೇಶ್ವರದ ಬೀನಾ ವೈದ್ಯ ಕಾಲೇಜಿನಲ್ಲಿ ಮೂರನೇ ವರ್ಷದ BCom ವಿದ್ಯಾರ್ಥಿ. ಆಲ್‌ರೌಂಡರ್ ಆಗಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಕ್ರಿಕೆಟ್ ಸಂಬಂಧಿತ ಸುದ್ದಿಗಳು :
Bhatkal man dies/ ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಭಟ್ಕಳದ ಯುವಕ ಸಾವು
cricket tournament/ ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ




