ಭಟ್ಕಳ: ನಗರದ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಹಿಂದು ಕೊಂಕಣಿ ಗೆಳೆಯರ ಬಳಗದ ವತಿಯಿಂದ ನಡೆದ ಹಿಂದೂ ಕೊಂಕಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (cricket tournament) ಸಮಾರೋಪ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಮಾರಂಭದ ಅಧ್ಯಕ್ಷತೆ ವಹಿಸಿ ಹಾಂಗ್ಯೋ ಐಸ್ ಕ್ರೀಮ್ ಪ್ರೈವೇಟ್ ಲಿಮಿಟೆಡ್ ಚೆರಮನ್ ದಿನೇಶ ಪೈ ಮಾತನಾಡಿ, ಕ್ರೀಡಾಕೂಟಗಳು ಪ್ರತಿಭಾನ್ವಿತ ಆಟಗಾರರನ್ನು ಅನ್ವೇಷಿಸಲು ಸಹಕಾರಿಯಾಗುತ್ತದೆ. ಇಂತಹ ಕ್ರೀಡಾಕೂಟದಲ್ಲಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಟಗಳಲ್ಲಿ ಆಡಲು ಪ್ರಯತ್ನಿಸಬೇಕು ಎಂದು ಹೇಳಿದರು.
Deputy Divisional Officer/ ಭಟ್ಕಳ ಉಪ ವಿಭಾಗಾಧಿಕಾರಿ ಹುದ್ದೆ ಭರ್ತಿ: ಜೆ ಮಹೇಶ ಅಧಿಕಾರ ಸ್ವೀಕಾರ
ಭಟ್ಕಳ ಎಜುಕೇಶನ್ ಟ್ರಸ್ಟಿ ಮೆನೇಜರ್ ರಾಜೇಶ ನಾಯಕ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ತರಹದ ಪ್ರತಿಭೆಗಳು ಇರುತ್ತವೆ. ಅವರಿಗೆ ಇಂತಹ ವೇದಿಕೆ ಖಂಡಿತವಾಗಿಯೂ ಸಹಕಾರಿಯಾಗುತ್ತವೆ ಎಂದರು. ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಶೇರುಗಾರ ಸಮಾಜದ ರಾಮದಾಸ್ ಎಮ್ ನಾಯ್ಕ, ವೈಶ್ಯವಾಣಿ ಸಮಾಜದ ಗುರುದತ್ತ ಶೇಟ್ ಮಾತನಾಡಿದರು. ಮಹಾಲೆ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ರಾಜೇಶ ಮಹಾಲೆ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುಧಾಕರ ಶೇಟ ಸೇರಿದಂತೆ ವಿವಿದ ಸಮಾಜದ ಪ್ರಮುಖರಾದ ತಿಮ್ಮಪ್ಪ ಖಾರ್ವಿ, ಮಾರುತಿ ಪಾವಸ್ಕರ, ವಿನಾಯಕ ಎಸ್ ಮಡಿವಾಳ, ಬಾಲಕೃಷ್ಣ ಶೇಟ ಇದ್ದರು.
Foundation Day/ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಕ್ರಿಕೆಟ್ ಪಂದ್ಯಾವಳಿಯ (cricket tournament) ಫೈನಲ್ ಪಂದ್ಯ ‘ಒಷಿಯನ್ ಚಾಲೆಂಜರ್ಸ್’ ಹಾಗೂ ‘ರಂಜನ್ ಚಾಲೆಂಜರ್ಸ್ ಭಟ್ಕಳ’ ತಂಡದ ನಡುವೆ ನಡೆಯಿತು. ನಡೆದು ಟಾಸ್ ಗೆದ್ದ ಒಷಿಯನ್ ಚಾಲೆಂಜರರ್ಸ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ೮೬ ರನ್ ಕಲೆ ಹಾಕಿತು. ನಂತರ ಚೇಸ್ ಮಾಡಲು ಬಂದ ರಮೇಶ ಖಾರ್ವಿ ಮಾಲಕತ್ವದ ಒಷಿಯನ್ ಚಾಲೆಂಜರ್ಸ್ ಮೊದಲ ಬಾಲಿಗೆ ಆಟಗಾರನನ್ನು ಕಳೆದುಕೊಂಡರೂ ಅಂತಿಮ ಕ್ಷಣದವರೆಗೆ ಕಾದಾಟ ನಡೆಸಿ ೬೫ ರನ್ ಕಲೆ ಹಾಕಿ ರನ್ನರ್ಸ ಅಪ್ ಗೆ ತೃಪ್ತಿ ಪಟ್ಟಿತು. ಕಿರಣ ಚಂದಾವರ ಹಾಗೂ ಶಾಂತರಾಮ ಭಟ್ಕಳ ಮಾಲೀಕತ್ವದ ರಂಜನ್ ಚಾಲೆಂಜರ್ಸ್ ಭಟ್ಕಳ (ಆರ್‌ಸಿಬಿ)” ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
Tragedy/ ಮುಂಡಳ್ಳಿ ನೆಸ್ತಾರ ಬೀಚ್‌ನಲ್ಲಿ ಅವಘಡ: ಸಮುದ್ರದಲ್ಲಿ ಮುಳುಗಿದ ಯುವಕರು
ಹಾಂಗ್ಯೋ ಐಸ್‌ಕ್ರೀಮ್ ಮೊದಲ ಬಹುಮಾನ ಹಾಗೂ ಟ್ರೋಫಿ, ಕಾಮಾಕ್ಷಿ ಜ್ಯುವೆಲರ್ಸ್ ರನ್ನರ್ಸ ಅಪ್ ಬಹುಮಾನದ ಪ್ರಾಯೋಜಕತ್ವ ನೀಡಿದ್ದರು. ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸಮನ್ ಆಗಿ ಒಷಿಯನ್ ಚಾಲೆಂಜರ್ಸ್ ತಂಡದ ನರೇಂದ್ರ ಖಾರ್ವಿ, ಅದೇ ತಂಡದ ಬೆಸ್ಟ್ ಬೌಲರ್ ಹಾಗೂ ಸರಣಿ ಶ್ರೇಷ್ಠ ಆಟಗಾರನಾಗಿ ಮನೋಜ ಖಾರ್ವಿ, ಪೈನಲ್ ಪಂದ್ಯದ ಪಂದ್ಯಪುರುಷನಾಗಿ ವಿನಾಯಕ ಶೇಟ ಪ್ರಶಸ್ತಿ ಪಡೆದುಕೊಂಡರು.
ರಾಮಚಂದ್ರ ಕಿಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರೆ. ದೀಪಕ ನಾಯ್ಕ ನಿರೂಪಿಸಿದರು. ನಿತೇಶ ಮಹಾಲೆ ವಂದಿಸಿದರು. ಲಕ್ಷ್ಮೀನಾರಾಯಣ ಪೈ, ಸಂದೀಪ ಶೇಟ, ಪವನ ನಾಯ್ಕ ಇತರರು ಸಹಕರಿಸಿದರು.
encroachment/ ರುದ್ರಭೂಮಿ ಅತಿಕ್ರಮಣಕ್ಕೆ ಅರಣ್ಯ ಇಲಾಖೆ ಮೌನ: ಜಾಲಿಯ ದೇವಿನಗರದಲ್ಲಿ ಗ್ರಾಮಸ್ಥರ ಆಕ್ರೋಶ



