ಭಟ್ಕಳ ಡೈರಿ ವರದಿ

ಭಟ್ಕಳ: ಗೋ ಸಂರಕ್ಷಣೆ ಮತ್ತು ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹೊರಟಿರುವ ಗೋ ಸಮ್ಮಾನ ರಥಯಾತ್ರೆ ನಾಳೆ, ಬುಧವಾರ ಭಟ್ಕಳ ತಾಲೂಕಿಗೆ ಆಗಮಿಸಲಿದೆ. ಬೆಳಿಗ್ಗೆ ೧೦ ಗಂಟೆಗೆ ಮುರ್ಡೇಶ್ವರ ಮಹಾದ್ವಾರದಲ್ಲಿ ರಥವನ್ನು ಸ್ವಾಗತಿಸಲಾಗುವುದು. ಬಳಿಕ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ರಥಯಾತ್ರೆ ಸಾಗಲಿದ್ದು, ಗೋಪ್ರೇಮಿಗಳು, ವಲಯದ ಶಿಷ್ಯಂದಿರು ಹಾಗೂ ಸಾರ್ವಜನಿಕರಿಗೆ ರಥದ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಗೋ ಸಮ್ಮಾನ ರಥದ ಸಂಚಾರ ವೇಳಾಪಟ್ಟಿ:

• ಬೆಳಿಗ್ಗೆ ೧೦.೦೦: ಮುರ್ಡೇಶ್ವರ ಮಹಾದ್ವಾರದಲ್ಲಿ ಸ್ವಾಗತ

• ಬೆಳಿಗ್ಗೆ ೧೦.೩೦: ಆದಿ ಮಾಸ್ತಿ ದೇವಸ್ಥಾನ, ಶಿರಾಲಿ

• ಬೆಳಿಗ್ಗೆ ೧೧.೦೦: ಹನುಮಂತ ದೇವಸ್ಥಾನ, ಮಣ್ಕುಳಿ

• ಬೆಳಿಗ್ಗೆ ೧೧.೩೦: ಚನ್ನಪಟ್ಟಣ ಹನುಮಂತ ದೇವಸ್ಥಾನ

• ಬೆಳಿಗ್ಗೆ ೧೧.೪೫: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಿತ್ರೆ

• ಸಂಜೆ ೪.೦೦: ಮುರ್ಡೇಶ್ವರ ದೇವಸ್ಥಾನ

ಸಂಪ್ರದಾಯಬದ್ಧವಾಗಿ ರಥಕ್ಕೆ ಸ್ವಾಗತ: ಗೋ ಸಮ್ಮಾನ ರಥಯಾತ್ರೆಯ ಆಗಮನದ ಸಂದರ್ಭದಲ್ಲಿ ಶಂಖಧ್ವನಿ ಹಾಗೂ ಜಯಘಂಟೆಗಳ ಮೊಳಗಿಸುವಿಕೆಯೊಂದಿಗೆ ಸ್ವಾಗತಿಸಲಾಗುವುದು. ಮಹಾನಂದಿಗೆ ಹಾರಾರ್ಪಣೆ, ಪುಷ್ಪಾರ್ಚನೆ ಹಾಗೂ ಆರತಿ ನೆರವೇರಿಸಲಾಗುತ್ತದೆ. ಬಳಿಕ ಐದು ನಿಮಿಷಗಳ ಪ್ರಾಸ್ತಾವಿಕ ಮಾತು, ಹಸ್ತಾಕ್ಷರ ಸಂಗ್ರಹ, ಗೋವಿನ ಹಾಡು ಮತ್ತು ಘೋಷಣೆಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ. ಅಂತಿಮವಾಗಿ ಸಂಗ್ರಹಿಸಿದ ಹಸ್ತಾಕ್ಷರ ಪತ್ರವನ್ನು ಸಮರ್ಪಿಸಿ ರಥಯಾತ್ರೆ ಮುಂದಿನ ಸ್ಥಳಕ್ಕೆ ನಿರ್ಗಮಿಸಲಿದೆ.

ತಾಲೂಕಿನ ಗೋಪ್ರೇಮಿಗಳು ತಮಗೆ ಅನುಕೂಲವಾದ ಸ್ಥಳಗಳಲ್ಲಿ ಗೋ ಸಮ್ಮಾನ ರಥದ ದರ್ಶನ ಪಡೆದು, ಹಸ್ತಾಕ್ಷರ ನೀಡುವ ಮೂಲಕ ಗೋಯಾತ್ರೆಗೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಹೊನ್ನಾವರ: ಮಾಗೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

Breaking news/ ಭಟ್ಕಳ ಹುಯ್ಲಮಡಿ ರಸ್ತೆಯಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು