ಭಟ್ಕಳ: ತಾಲೂಕಿನ ಯಲ್ವಡಿಕವೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುರವರ್ಗ ಮುಗಳಿಹೊಂಡದ ಹಾಡಿ ಜಾಗದಲ್ಲಿ ಕಪ್ಪು ಬಣ್ಣದ ಮಲ್ನಾಡು ಗಿಡ್ಡ ತಳಿಯ ಆಕಳನ್ನು ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ (arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತರಲ್ಲಿ ಪ್ರಮುಖ ಆರೋಪಿ ಫಹೀಮ್ ಮಹಮ್ಮದ ಆದಂ (38), ಪುರವರ್ಗ ಗಣೇಶನಗರ ನಿವಾಸಿ. ಘಟನೆಯಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಯುವಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಆಕಳನ್ನು ಹತ್ಯೆ ಮಾಡುವ ಉದ್ದೇಶದಿಂದ ಯಾವುದೋ ಹರಿತವಾದ ಆಯುಧದಿಂದ ಹಿಂಸಾತ್ಮಕವಾಗಿ ಇರಿದು ಸಾಯಿಸಿದ್ದರು. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸರ್ಕಾರದ ಪರವಾಗಿ ಪಿಎಸೈ ನವೀನ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ನಗರ ಠಾಣೆಯ ಪಿಎಸೈ ತಿಮ್ಮಪ್ಪ ಎಸ್ ಅವರು ಕರ್ನಾಟಕ ಗೋಹತ್ಯೆ ನಿರ್ಬಂಧ ಹಾಗೂ ಪಶು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಪರಿಶೀಲನೆ ನಡೆಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (arrested).

stone pelting/ ಅನ್ಯಕೋಮಿನ ಯುವಕರಿಂದ ಮನೆಗಳ ಮೇಲೆ ಕಲ್ಲು ತೂರಾಟ: ಹಿಂದೂ ಕಾರ್ಯಕರ್ತರಿಂದ ಮುರ್ಡೇಶ್ವರ ಠಾಣೆ ಎದುರು ಪ್ರತಿಭಟನೆ

ಸಮಗ್ರ ತನಿಖೆಯ ನಂತರ ಮುಖ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಕಾರವಾರ ಉಪಕಾರಾಗೃಹಕ್ಕೆ ಸಾಗಿಸಲಾಗಿದೆ. ಅಪ್ರಾಪ್ತ ಯುವಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

Death news/ ಮಂಚದಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು: ಚಿಕಿತ್ಸೆ ಫಲಿತದೆ ಆಸ್ಪತ್ರೆಯಲ್ಲಿ ನಿಧನ