ಭಟ್ಕಳ ಡೈರಿ ವರದಿ
ಭಟ್ಕಳ: ರಾಜ್ಯದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯ ಭಟ್ಕಳ ಮಂಡಲದ ವತಿಯಿಂದ ನವೆಂಬರ್ ೩೦ರಂದು ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಬಿಜೆಪಿ ಭಟ್ಕಳ ಮಂಡಲವು ಈಗಾಗಲೇ ಸಂಘಟನಾ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ವಿವಿಧ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಲಾಗಿದೆ.
ಸಭೆಗಳ ವೇಳಾಪಟ್ಟಿ ಹೀಗಿದೆ:
ನವೆಂಬರ್ ೨೫ರಂದು ಮಾವಳ್ಳಿ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೫.೩೦ಕ್ಕೆ ತೆರ್ನಮಕ್ಕಿ ಗಣೇಶೋತ್ಸವ ಸಭಾಭವನದಲ್ಲಿ ನಡೆಯಲಿದೆ. ಹೆಬ್ಳೆ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೬.೩೦ಕ್ಕೆ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಲಿದೆ.
ನವೆಂಬರ್ ೨೬ರಂದು ಶಿರಾಲಿ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೬ ಗಂಟೆಗೆ ಸರ್ಕಾರಿ ಮಾದರಿ ಶಾಲೆಯಲ್ಲಿ ಹಾಗೂ ನಗರ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೭ ಗಂಟೆಗೆ ಸೋನಾರಕೇರಿಯ ದೈವಜ್ಞ ಸಭಾಭವನದಲ್ಲಿ ನಡೆಯಲಿದೆ.
ನವೆಂಬರ್ ೨೭ರಂದು ಜಾಲಿ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೫.೩೦ಕ್ಕೆ ಹುರಳಿಸಾಲಿನ ಗಣೇಶೋತ್ಸವ ಸಭಾಭವನದಲ್ಲಿ ಹಾಗೂ ಬೆಳ್ಕೆ ಮಹಾಶಕ್ತಿ ಕೇಂದ್ರದ ಸಭೆ ಸಂಜೆ ೬.೩೦ಕ್ಕೆ ಬಂಟಗೊಂಡ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಆಯಾ ಮಹಾಶಕ್ತಿ ಕೇಂದ್ರಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಂಡು, ನವೆಂಬರ್ ೩೦ರಂದು ನಡೆಯಲಿರುವ ಪಾದಯಾತ್ರೆ ಮತ್ತು ಪ್ರತಿಭಟನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಬಿಜೆಪಿ ಭಟ್ಕಳ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮನವಿ ಮಾಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ಗೆ ಸ್ವಾಗತ; ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಮೂರು ದಿನ ಕಬಡ್ಡಿ ರಂಗೇರಲಿದೆ ಭಟ್ಕಳ; ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ ಆಗಮನ



