85 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ 8 ವಿದ್ಯಾ ಸಂಸ್ಥೆಗಳಲ್ಲಿ ಒಂದು ಪ್ರತಿಷ್ಠಿತ ಶ್ರೀ ಗುರು ಸುಧೀಂದ್ರ ಕಾಲೇಜು (SGS College). ಕರ್ನಾಟಕ ಸರ್ಕಾರದ (Karnataka Government) ಮಾನ್ಯತೆಯೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಸಂಯೋಜನೆಗೊಳಪಟ್ಟ ಬಿಕಾಂ (Bcom), ಬಿಎ (BA), ಬಿಸಿಎ (BCA), ಬಿಬಿಎ (BBA) ಕೋರ್ಸುಗಳನ್ನು  ಹೊಂದಿದೆ. ಈ ವರ್ಷದಿಂದ BSc with Criminology & Forensic Science – ಎನ್ನುವ ವಿಶೇಷ ಕೋರ್ಸನ್ನು ಸಹ ಆರಂಭಿಸಿದ್ದು, ಈಗಾಗಲೇ ದಾಖಲಾತಿಯು (Admissions) ಸಹ ಪ್ರಾರಂಭವಾಗಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

  • ಪ್ರತಿವರ್ಷ ನೂರಾರು ಉದ್ಯೋಗಾರ್ಹ ಪದವೀಧರರನ್ನು ರೂಪಿಸುತ್ತಿರುವ ಸಂಸ್ಥೆ.
  •  ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಶಸ್ತ್ಯ.
  • ಬಿಕಾಂ, ಬಿಸಿಎ, ಬಿಸಿಎ ಯೊಂದಿಗೆ ಸ್ಥಳೀಯ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಹೊಸ ವಿಷಯಗಳ ಸಂಯೋಜನೆಯೊಂದಿಗೆ ಬಿಎ ತರಗತಿಗಳಿಗೆ ಪ್ರವೇಶಾತಿ (Admissions) ಆರಂಭ.

ಉದ್ಯೋಗ ನೀಡುವ ಧ್ಯೇಯವನ್ನಿಟ್ಟು ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ, ಕ್ಯಾಂಪಸ್ ಸಂದರ್ಶನಕ್ಕೆ ಹೆಸರುವಾಸಿಯಾಗಿದೆ. ವಿಪ್ರೋ, ಇನ್ಫೋಸಿಸ್, ಟಿ.ಸಿ.ಎಸ್, ಫಿಡಿಲಿಟಿ, ದಿಯಾ ಸಿಸ್ಟಮ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಬಿಸಿಎ ಪದವಿ ಪಡೆದು ಬಹುರಾಷ್ಟ್ರೀಯ ಕಂಪನಿ & ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ತಮ್ಮ ಬಾಳನ್ನು ಬೆಳಗಾಗಿಸಿಕೊಂಡಿದ್ದಾರೆ. ಬಿಕಾಂ ಪದವಿ ಪಡೆದು ಬ್ಯಾಂಕಿಂಗ್, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿ.ಎ, ಸಿ.ಎಸ್ ತರಬೇತಿಯನ್ನು ವಿ.ರೀಚ್ ಅಕಾಡೆಮಿಯೊಂದಿಗೆ ಆರಂಭಿಸಿದ್ದು, ಜೊತೆಗೆ ಸರ್ಕಾರಿ ಉದ್ಯೋಗಾವಕಾಶವನ್ನು ಪಡೆಯಲು ಐ.ಎ.ಎಸ್ -ಕೆ.ಎ.ಎಸ್ ತರಬೇತಿ ಪ್ರಾರಂಭಿಸಲಾಗಿದೆ. ಬಿಎಸ್ಸಿ ವಿತ್ ಕ್ರಿಮಿನಾಲಾಜಿ ಹಾಗೂ ಫೊರೆನ್ಸಿಕ್ ಸೈನ್ಸ್ ಪದವಿ ಪಡೆದು ಸರ್ಕಾರಿ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳ & ನಾಗರಿಕರ ಅಪೇಕ್ಷೆ ಮೇರೆಗೆ ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಸಂಯೋಜನೆಯೊಂದಿಗೆ, ಕಂಪ್ಯೂಟರ್ ತರಬೇತಿ ಒಳಗೊಂಡಂತೆ ಹಲವು ಸೌಲಭ್ಯದೊಂದಿಗೆ ಬಿಎ ಕೋರ್ಸ್ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

  • ಮೆರಿಟ್ ಆಧಾರಿತ ಶಿಕ್ಷಣ ಶುಲ್ಕ.
  • ಫೀ ತುಂಬಲು ಇನ್ ಸ್ಟಾಲ್ ಮೆಂಟ್ ವ್ಯವಸ್ಥೆ.
  • ಅರ್ಹ ಅನುಭವಿ ನುರಿತ ಶಿಕ್ಷಕರಿಂದ ಬೋಧನೆ.
  • ಉದ್ಯೋಗ ಕೇಂದ್ರಿತ ಕೌಶಲ್ಯ ತರಬೇತಿ.
  • ಹೊಸ ತಂತ್ರಜ್ಞಾನ ಒಳಗೊಂಡ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್.
  • ಸ್ಪೋಕನ್ ಇಂಗ್ಲೀಷ್ ದೊಂದಿಗೆ ಸಿಎ-ಸಿಎಸ್, ಐಎಎಸ್ – ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ.
  • ಕ್ಯಾಂಪಸ್ ಇಂಟರ್ವ್ಯೂ.
  • ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆ.
  • ಪಠ್ಯೇತರ & ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 89710 71471 / 89710 98090

degree exams/ ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ