ಭಟ್ಕಳ: “ದಿ ನ್ಯೂ ಇಂಗ್ಲಿಷ್ ಶಾಲೆಯ (NES school) ಹಳೇ ವಿದ್ಯಾರ್ಥಿಗಳ ಸಮಾಗಮ (Alumni Reunion) ಹಾಗೂ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಏಪ್ರಿಲ್ ೨೯ರಂದು ಬೆಳಿಗ್ಗೆ ೧೧ ಗಂಟೆಗೆ ಶಾಲೆಯ ಆವರಣದಲ್ಲಿ ಜರುಗಲಿದೆ” ಎಂದು ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹೇಳಿದರು. ಅವರು ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (SGS College) ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಈ ಕುರಿತು ಮಾಹಿತಿ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

“೨೦ನೇ ಶತಮಾನದ ಆರಂಭದಲ್ಲಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಅವಕಾಶಗಳು ಬಹಳ ಸೀಮಿತವಾಗಿದ್ದವು. ತಾಲೂಕು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಿದ್ದ ಕೆಲವೇ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳು ಜನರ ಜ್ಞಾನ ದಾಹವನ್ನು ಪೂರೈಸಲು ಸಾಕಾಗುತ್ತಿರಲಿಲ್ಲ. ಮಾಧ್ಯಮಿಕ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹೊನ್ನಾವರ, ಕುಮಟಾ ಮುಂತಾದ ಪಟ್ಟಣಗಳಿಗೆ ತೆರಳಬೇಕಾಗುತ್ತಿತ್ತು. ವಿದ್ಯಾರ್ಥಿನಿಯರಿಗಂತೂ ಶಿಕ್ಷಣ ಗಗನಕುಸುಮವಾಗಿತ್ತು” ಎಂದರು.

Murudeshwar/ ಮುರುಡೇಶ್ವರದಲ್ಲಿ ಸರ್ಕಾರಿ ಸಾರಿಗೆ ಬಸ್ಸಿಗೆ ಬೆಂಕಿ

ಸರ್ವರಿಗೂ ಶಿಕ್ಷಣ ದೊರೆಯಬೇಕೆನ್ನುವ ಮಹತ್ವಕಾಂಕ್ಷೆಯಿಂದ ೧೯೩೫ರಲ್ಲಿ ತಾಲೂಕಿನ ಎಜ್ಯುಕೇಶನ್ ಟ್ರಸ್ಟನ್ನು (ಬಿಇಟಿ) ನಾಗಪ್ಪ ವಾಮನ ನಾಯಕ, ರಾಮಕೃಷ್ಣ ನಾಯಕ ಹಾಗೂ ವಾಮನ ಗಣಪಯ್ಯ ಶಾನಭಾಗ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸ್ಥಾಪಿಸಲಾಯಿತು. ಈ ಕಾರ್ಯಕ್ಕೆ ಅನೇಕ ಸಮಾಜಮುಖಿ ವ್ಯಾಪಾರಿ ಕುಟುಂಬಗಳು, ಶಿಕ್ಷಣ ಪ್ರೇಮಿಗಳು ಹಾಗೂ ದಾನಿಗಳಿಂದ ಅಮೂಲ್ಯ ಸಹಕಾರ ದೊರೆಯಿತು ಎಂದು ತಿಳಿಸಿದರು.

champion/ ಮಣ್ಕುಳಿ ಪ್ರೀಮಿಯರ್ ಲೀಗ್: ರಾಯಲ್ ಸಾಮ್ರಾಟ ಚಾಂಪಿಯನ್ 

ದಿ ನ್ಯೂ ಇಂಗ್ಲಿಷ್ ಶಾಲೆ ೪ ಜುಲೈ ೧೯೩೫ರಂದು ಕಾರ್ಯಾರಂಭ ಮಾಡಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ಪ್ರಾರಂಭಿಸಿತು. ೧೯೩೫-೩೬ನೇ ಶೈಕ್ಷಣಿಕ ವರ್ಷದಲ್ಲಿ ೩೪ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆ ಇಂದು ೯೦ ವರ್ಷಗಳ ಯಶಸ್ವಿ ಸೇವೆ ಸಲ್ಲಿಸಿ ಶತಮಾನೋತ್ಸವದತ್ತ ಹೆಜ್ಜೆಯಿಡುತ್ತಿದೆ. ಈ ಸುಸಂದರ್ಭದಲ್ಲಿ ಅಲ್ಯುಮ್ನಿ ರಿಯುನಿಯನ್ (Alumni Reunion) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಲಾಗಿದೆ. ಹಳೆಯ ವಿದ್ಯಾರ್ಥಿಗಳು ೯೧೧೩೮೭೧೪೭೧ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ರಾಜೇಶ ನಾಯಕ ತಿಳಿಸಿದ್ದಾರೆ.

arrested/ ಕೋರ್ಟ್ ಜಾಮೀನಿಗೆ ನಕಲಿ ದಾಖಲೆ ನೀಡಲು ಯತ್ನಿಸಿ ಪರಾರಿಯಾಗಿದ್ದ ಮಂಗಳೂರು ವ್ಯಕ್ತಿ ಬಂಧನ

ಬಿಇ ಟಿ ಅಧ್ಯಕ್ಷ ಸುರೇಶ ನಾಯಕ, ಟ್ರಸ್ಟಿಗಳಾದ ಪ್ರದೀಪ ಪೈ, ನಾಗೇಶ ಭಟ್, ಶ್ರೀಧರ ಶ್ಯಾನಭಾಗ, ರಮೇಶ ಖಾರ್ವಿ, ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ, ನ್ಯೂ ಇಂಗ್ಲಿಷ್ ಪಿ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ, ವಿದ್ಯಾಭಾರತಿ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ, ನ್ಯೂ ಇಂಗ್ಲಿಷ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಶಿರೂರು ಮತ್ತಿತರರು ಉಪಸ್ಥಿತರಿದ್ದರು.

fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು