ಭಟ್ಕಳ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುರುಡೇಶ್ವರದ (Murudeshwar) ಮಹಿಳೆಯೊಬ್ಬಳು ಚಿಕಿತ್ಸೆಗೂ ಸ್ಪಂದಿಸದೆ ಮೃತಪಟ್ಟಿದ್ದಾರೆ (Woman death). ಮುರುಡೇಶ್ವರ ಮೂಡಶಿರಾಲಿಯ ಮಾಲತಿ ನಾಯ್ಕ (೪೫) ಮೃತ ದುರ್ದೈವಿ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ  ಏಪ್ರಿಲ್ ೧೬ರಂದು ಹೊಟ್ಟೆನೋವು ಕಾಣಿಸಿಕೊಂಡಿತು. ಏಪ್ರಿಲ್ ೧೭ರಂದು ಮಾಲತಿ ನಾಯ್ಕ ಅವರನ್ನು ಭಟ್ಕಳದ (Bhatkal) ಸಂಶನೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ಚಿಕಿತ್ಸೆಯಲ್ಲಿ ಚೇತರಿಕೆಯಾಗದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಉಡುಪಿ (Udupi) ಕಡೆ ತೆರಳುತ್ತಿದ್ದಾಗ ದಾರಿ  ಮಧ್ಯ ಮಾಲತಿ ನಾಯ್ಕ ಅವರು ಉಸಿರು ನಿಲ್ಲಿಸಿದರು (Woman death).  ಸಾವಿನ ಬಗ್ಗೆ ಮಾಲತಿ ಅವರ ಪತಿ ನಾಗರಾಜ ನಾಯ್ಕ ಮಾಹಿತಿ ನೀಡಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

Admissions/ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭ