ಭಟ್ಕಳ ಡೈರಿ ವರದಿ
ಭಟ್ಕಳ: ಯುವಜನರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ (BMYF) ವತಿಯಿಂದ ಆಜಾದ್ ನಗರದ ತಾಜ್ ಎಲಿಗೆನ್ಸ್ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಟೇಬಲ್ ಟೆನಿಸ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅ. ೧೭ ಮತ್ತು ೧೮ರಂದು ನಡೆದ ಪಂದ್ಯಾವಳಿಯಲ್ಲಿ ಒಟ್ಟು ೫೬ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು.
ಯುವಜನರನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟು ಕ್ರೀಡೆಯತ್ತ ಸೆಳೆಯುವುದು, ದೈಹಿಕ ಆರೋಗ್ಯದ ಮಹತ್ವ ತಿಳಿಸುವುದು ಹಾಗೂ ಮಾದಕ ವಸ್ತುಗಳು ಸೇರಿದಂತೆ ಹಾನಿಕಾರಕ ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸುವುದು ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿತ್ತು.
ವಿವಿಧ ವಿಭಾಗಗಳ ವಿಜೇತರು: ಅಂಡರ್-೧೬ ಸಿಂಗಲ್ಸ್ ವಿಭಾಗದಲ್ಲಿ ಫೈಝಾನ್ ಗೋಲ್ಟೆ ಪ್ರಥಮ ಸ್ಥಾನ ಪಡೆದರೆ, ನಿಬ್ರಾಜ್ ಖಮ್ರಿ ರನ್ನರ್ ಅಪ್ ಆದರು. ಅಂಡರ್-೧೬ ಡಬಲ್ಸ್ ವಿಭಾಗದಲ್ಲಿ ಫೈಝಾನ್ ಗೋಲ್ಟೆ ಮತ್ತು ನಖಿ ಜುಶುದ್ದಿ ಜೋಡಿ ಪ್ರಶಸ್ತಿ ಗೆದ್ದಿತು. ಮೊಹಮ್ಮದ್ ಅರ್ಮಾರ್ ಮತ್ತು ಅಲಿ ಸಿದ್ದೀಖಾ ಜೋಡಿ ರನ್ನರ್ ಅಪ್ ಆಯಿತು. ಓಪನ್ ಸಿಂಗಲ್ಸ್ ವಿಭಾಗದಲ್ಲಿ ಅಬ್ದುಲ್ ಹಮೀದ್ ಗವಾಯಿ ವಿಜೇತರಾದರೆ, ಜಾಸಿರ್ ಅರ್ಮಾರ್ ದ್ವಿತೀಯ ಸ್ಥಾನ ಪಡೆದರು. ಓಪನ್ ಡಬಲ್ಸ್ನಲ್ಲಿ ಜಾಸಿರ್ ಅರ್ಮಾರ್ ಮತ್ತು ರಈದ್ ಮುಸ್ಬಾ ಜೋಡಿ ಪ್ರಥಮ ಸ್ಥಾನ ಗಳಿಸಿತು. ಅಬ್ದುಲ್ ಹಮೀದ್ ಗವಾಯಿ ಮತ್ತು ಸಮೀರ್ ಅರ್ಮಾರ್ ಜೋಡಿ ರನ್ನರ್ ಅಪ್ ಆಯಿತು.
ಸಮಾರೋಪ ಸಮಾರಂಭ: ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರೊ. ಜಾವೇದ್ ಅರ್ಮಾರ್, ಉದ್ಯಮಿ ಫವಾಝ್ ಶಾಬಂದ್ರಿ, BMYF ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ, ಪಂದ್ಯಾವಳಿಯ ಸಂಚಾಲಕ ಫೈಸಲ್ ಅರ್ಮಾರ್ ಹಾಗೂ ಕ್ರೀಡಾ ವಿಭಾಗದ ಉಸ್ತುವಾರಿ ಅಫ್ಝಲ್ ಖಾಸಿಮ್ಜಿ ಉಪಸ್ಥಿತರಿದ್ದರು.
ಇದನ್ನೂ ಓದಿ :




