ಭಟ್ಕಳ ಡೈರಿ ವರದಿ

ಭಟ್ಕಳ: ಶಿರಾಲಿಯ ಮಠದಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ದ್ವಿತೀಯ ವರ್ಷದ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ನಡೆಯಿತು. ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ವಿಜೇತರಿಗೆ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಲಾಯಿತು.

ಕಿರಿಯರ ವಿಭಾಗದಲ್ಲಿ ಸಮುದ್ ಪೈ ಪ್ರಥಮ ಸ್ಥಾನ ಪಡೆದರೆ, ಭಾರತಿ ರಾಘವೇಂದ್ರ ಗಾಯತೊಂಡೆ ದ್ವಿತೀಯ ಸ್ಥಾನ ಗಳಿಸಿದರು. ಅನಘಾ ನಾಗರಾಜ ಮಧ್ಯಸ್ಥ ಹಾಗೂ ವಿದಿತಿ ಗುರುರಾಜ ಗಾಣಿಗ ತೃತೀಯ ಸ್ಥಾನ ಹಂಚಿಕೊಂಡರು. ಹಿರಿಯರ ವಿಭಾಗದಲ್ಲಿ ತ್ರಿಶಾ ಎನ್. ಮೊಗೇರ ಪ್ರಥಮ ಸ್ಥಾನ ಪಡೆದರು. ಪಾವನಿ ರಾಘವೇಂದ್ರ ಗಾಯತೊಂಡೆ ದ್ವಿತೀಯ ಸ್ಥಾನ ಗಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ನಾಯ್ಕ, ಗೌರವಾಧ್ಯಕ್ಷ ಶಿವಾನಂದ ಕಾಮತ್, ಪ್ರಧಾನ ಅರ್ಚಕ ಸಿ.ಎಂ. ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೇವಿದಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ :

ಮುರುಡೇಶ್ವರದ ಕಾಯ್ಕಿಣಿಯಲ್ಲಿ ನಾಲ್ಕನೇ ವರ್ಷದ ಶಾರದೋತ್ಸವ ಸಂಪನ್ನ

ಭಟ್ಕಳದ ಜಲಸುರಕ್ಷತೆಗೆ ಈಗಲೇ ಎಚ್ಚೆತ್ತುಕೊಳ್ಳಲಿ!