ಭಟ್ಕಳ: ಮನೆ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿ ಬಿದ್ದಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಟ್ಕಳದ (Bhatkal) ಜಾಲಿ ಗ್ರಾಮದ ಶೇಡಕುಳಿ ಹೊಂಡಾದಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗೃಹಿಣಿ ತಹಸೀನ್ ಭಾನು ಮೆಹಬೂಬಲಿ ಶೇಖ್ ಅವರು ಕೆಎ ೩೧ ಇಎಫ್ ೬೫೩೨ ನೋಂದಣಿಯ ಬಜಾಜ್ ಪಲ್ಸರ್ ಬೈಕ್ ಹೊಂದಿದ್ದು, ಮಾರ್ಚ ೧೯ರ ನಸುಕಿನಲ್ಲಿ ಆ ಬೈಕ್ ಬೆಂಕಿಗೆ ಆಹುತಿಯಾಗಿದೆ. ನಸುಕಿನ ೧.೩೦ಕ್ಕೆ ಅವರು ಬೈಕ್ ಹೊತ್ತಿ ಉರಿಯುವುದನ್ನು ನೋಡಿದ್ದು, ಬೆಂಕಿ ಆರಿಸಲು ಅವರಿಂದ ಸಾಧ್ಯವಾಗಿಲ್ಲ.
Bike accident/ ಮುರುಡೇಶ್ವರದಲ್ಲಿ ಬೈಕ್ ಅಪಘಾತ: ಸವಾರ ಸ್ಥಳದಲ್ಲಿಯೇ ಸಾವು
ಮನೆ ಹೊರಗಿನ ಅಂಗಳದಲ್ಲಿದ್ದ ಬೈಕ್ ಏಕಾಏಕಿ ಹೊತ್ತಿ ಉರಿಯುವ ಸಾಧ್ಯತೆಗಳಿರಲಿಲ್ಲ. ಯಾವುದೇ ಅಪಾಯಕಾರಿ ಸ್ಥಳದಲ್ಲಿಯೂ ಬೈಕನ್ನು ಅವರು ನಿಲ್ಲಿಸಿರಲಿಲ್ಲ. ಅದಾಗಿಯೂ, ಅಂದಾಜು ೭೦ ಸಾವಿರ ರೂ ಮೌಲ್ಯದ ಬೈಕ್ ಸುಟ್ಟು ಕರಕಲಾಗಿದ್ದು, ಭಟ್ಕಳದ ಯಾಸೀನ್ ನಾಜೀರ್ ಖಾನ್ ಮೇಲೆ ಅನುಮಾನ ವ್ಯಕ್ತವಾಗಿದೆ. ತಹಸೀನ್ ಭಾನು ಅವರು ಯಾಸೀನ್ ಖಾನ್ ಅವರ ವಿರುದ್ಧ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ (complaint registered).



