ಭಟ್ಕಳ: ಟ್ಯಾಕ್ಸಿ ಚಾಲಕರ ವಿರುದ್ಧ ಆಟೋರಿಕ್ಷಾ ಚಾಲಕರು ಮನವಿ ಸಲ್ಲಿಸಿದ ಬೆನ್ನಲ್ಲೇ ಭಟ್ಕಳ (Bhatkal) ತಾಲೂಕು ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದವರು ರವಿವಾರ ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಪಿಐ ದಿವಾಕರ್ ಪಿ ಎಂ ಅವರಿಗೆ ಮನವಿ (memorandum) ಸಲ್ಲಿಸಿ, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಘದ ಪದಾಧಿಕಾರಿಗಳು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಟ್ಯಾಕ್ಸಿ ಚಾಲಕ-ಮಾಲಕರ ಸಂಘವನ್ನು ಕಾನೂನುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದು, ಪರ್ಮಿಟ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಯಾವುದೇ ವಿವಾದವಿಲ್ಲದೆ ವೃತ್ತಿ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು. ಭಟ್ಕಳದಿಂದ ದೂರದ ಊರುಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಸೇವೆಯನ್ನು ನಿಯಮಾನುಸಾರವಾಗಿ ನೀಡುತ್ತಿದ್ದೇವೆ ಎಂದು ವಿವರಿಸಿದರು.

Hindu conference/ ಮಾರುಕೇರಿಯಲ್ಲಿ ಅದ್ದೂರಿ ಹಿಂದೂ ಸಮ್ಮೇಳನ 

ಫೆ ೧೩ರಂದು ಉತ್ತರ ಕನ್ನಡ (Uttara Kannada) ಜಿಲ್ಲಾಧಿಕಾರಿ ಕಚೇರಿ ಸಮಕ್ಷಮ ನಡೆದ ಸಭೆಯಲ್ಲಿ ತಮ್ಮ ಸಂಘದವರೂ ಪಾಲ್ಗೊಂಡಿದ್ದು, ಪರ್ಮಿಟ್ ವಿಚಾರವನ್ನು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಆವರೆಗೆ ಶಾಂತತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದನ್ನು ಸಂಘದವರು ಉಲ್ಲೇಖಿಸಿದರು.

police inspector/ ಭಟ್ಕಳ ಗ್ರಾಮೀಣ ಠಾಣೆಗೆ ನೂತನ ಇನ್ಸ್ಪೆಕ್ಟರ್ 

ಇಂತಹ ಸಂದರ್ಭದಲ್ಲಿ ಫೆ ೧೪ರಂದು ಭಟ್ಕಳ ಆಟೋ ಚಾಲಕ-ಮಾಲಕರ ಸಂಘ ತಮ್ಮ ವಿರುದ್ಧ ದಬ್ಬಾಳಿಕೆ ಹಾಗೂ ಹಣ ಲೂಟಿ ಆರೋಪ ಮಾಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿರುವುದು ಆಧಾರರಹಿತ ಎಂದು ಟ್ಯಾಕ್ಸಿ ಸಂಘದವರು ಹೇಳಿದರು.

Woman died/ ವ್ಯಕ್ತಿಯೋರ್ವ ಪದೇ ಪದೇ ಫೋನ್ ಮಾಡಿದ್ದಕ್ಕೆ ನೇಣು ಬಿಗಿದುಕೊಂಡ ಮಹಿಳೆ 

ಬೈಂದೂರಿಗೆ (Byndooru) ಬಾಡಿಗೆಗೆ ತೆರಳಿದ್ದ ಆಟೋ ಚಾಲಕರಿಗೆ ಕೇವಲ ಸೌಜನ್ಯದಿಂದ ಜಿಲ್ಲಾಧಿಕಾರಿ ಆದೇಶ ಬರುವವರೆಗೆ ತಾಳ್ಮೆಯಿಂದ ಇರಲು ವಿನಂತಿಸಿದ್ದೇವೆ ಹೊರತು ಯಾವುದೇ ರೀತಿಯ ಹಿಂಸೆ ಅಥವಾ ಹಣ ವಸೂಲಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಭಟ್ಕಳ (Bhatkal) ನಗರ ಠಾಣೆಯಲ್ಲಿ ದೂರು ಸಲ್ಲಿಸಿರುವುದು ಕಾನೂನಾತ್ಮಕವಲ್ಲ ಎಂಬುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಸಂಘದ ಸದಸ್ಯರು ಯಾವುದೇ ತಪ್ಪು ಮಾಡಿಲ್ಲವೆಂದು ತಿಳಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸರಲ್ಲಿ ಮನವಿ (memorandum) ಮಾಡಿದ್ದಾರೆ.

appeal/ ಟ್ಯಾಕ್ಸಿ ಚಾಲಕರ ವಿರುದ್ಧ ಆಟೋರಿಕ್ಷಾ ಚಾಲಕರ ಅಸಮಾಧಾನ- ಶಹರ ಪೊಲೀಸ್ ಠಾಣೆಗೆ ಮನವಿ

ಮನವಿ ಸ್ವೀಕರಿಸಿದ ಪಿಐ ದಿವಾಕರ ಪಿ ಎಂ ಮಾತನಾಡಿ, ಅಪರಾಧ ಎಲ್ಲಿಯೇ ನಡೆದಿದ್ದರೂ ಯಾವುದೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಜೀರೋ ಎಫ್‌ಐಆರ್ ನೋಂದಾಯಿಸಿದ ಬಳಿಕ ಸಂಬಂಧಪಟ್ಟ ಠಾಣೆಗೆ ತನಿಖೆಗಾಗಿ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು. ಯಾವುದೇ ಸಮಸ್ಯೆಯಿದ್ದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

Shivaratri/ ತಂತ್ರಜ್ಞಾನದ ಮೊರೆ ಹೋದ ಮುರುಡೇಶ್ವರ ಪೊಲೀಸರು

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನವೀನ ನಾಯ್ಕ, ಉಡುಪಿ (Udupi) ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೊಟ್ಟಿಯಾನ್, ತಾಲೂಕು ಅಧ್ಯಕ್ಷ ಗಣೇಶ ದೇವಡಿಗ, ಸಾಸ್ತಾನ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ, ಭಟ್ಕಳ ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ, ಉಪಾಧ್ಯಕ್ಷ ಮಹ್ಮದ ಮುಷ್ತಾಕ್ ಹಾಗೂ ಉ ಕ ಜಿಲ್ಲಾ ಮತ್ತು ದಕ್ಷಿಣ ಕನ್ನಡ (Dakshina Kannada) ಭಾಗದ ಟ್ಯಾಕ್ಸಿ ಚಾಲಕರು ಉಪಸ್ಥಿತರಿದ್ದರು.

Pratibha karanji/ ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಕುಂಟವಾಣಿ ಶಾಲೆಯ ಶ್ರೀಕರ ಹೆಬ್ಬಾರ ಧಾರ್ಮಿಕ ಪಠಣದಲ್ಲಿ ಪ್ರಥಮ