ಭಟ್ಕಳ: ಸವಾರನ ನಿಯಂತ್ರಣ ತಪ್ಪಿದ ಬೈಕ್ ಅಪಘಾತಕ್ಕೀಡಾಗಿ (Bike accident) ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಬೈಲೂರಿನ ಸಣ್ಣಬಳಸೆ ಬಳಿ ರಾಮಚಂದ್ರ ಮಂಜುನಾಥ ದೇವಾಡಿಗ (40) ಮೃತ ದುರ್ದೈವಿ. ಅವರು ಸೆಂಟ್ರಿಂಗ್ ಕೆಲಸ ಮಾಡಿ ಬದುಕು ನಡೆಸುತ್ತಿದ್ದರು. ಮಾರ್ಚ ೨೧ರ ರಾತ್ರಿ ನಡೆದ ಅಪಘಾತದಲ್ಲಿ ಅವರು ಸಾವನಪ್ಪಿದ್ದಾರೆ. ಆ ದಿನ ರಾತ್ರಿ ರಾಮಚಂದ್ರ ದೇವಾಡಿಗ ಅವರು ಮುರುಡೇಶ್ವರದಿಂದ ಬೈಲೂರು ಕಡೆಗೆ ಬೈಕ್ ಓಡಿಸುತ್ತಿದ್ದರು. ಅವರ ಬೈಕು ಗುದಿಗದ್ದೆ ಕ್ರಾಸಿನ ಬಳಿ ನಿಯಂತ್ರಣ ತಪ್ಪಿದ ಪರಿಣಾಮ ಬೈಕು ಡಿವೈಡರಿಗೆ ಗುದ್ದಿತು (Bike accident). ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾದ ರಾಮಚಂದ್ರ ದೇವಾಡಿಗ ಅವರು ಅಲ್ಲಿಯೇ ಸಾವನಪ್ಪಿದರು. ತಮ್ಮನ ಸಾವಿನ ಬಗ್ಗೆ ಪರಮಯ್ಯ ದೇವಾಡಿಗ ಅವರು ಮಾಹಿತಿ ನೀಡಿದ್ದು, ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

cattle rescued/ ಭಟ್ಕಳದಲ್ಲಿ ೫ ಜಾನುವಾರು ರಕ್ಷಣೆ