ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಅಜಾಗರೂಕ ಚಾಲನೆಯ ಆರೋಪದಡಿ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕೋಣಾರ ಕ್ರಾಸ್ ಬಳಿ ನಡೆದಿದೆ. ಘಟನೆ ಅ. ೧೮ರಂದು ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ನಡೆದಿದೆ. ಈ ಕುರಿತು ಬೈಕ್ ಸವಾರ ಈಶ್ವರ ನಾಯ್ಕ ಅವರ ಪತ್ನಿ ಆಶಾ ಅವರು ಅ.೧೯ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಪ್ರಕಾರ, ಈಶ್ವರ ನಾಯ್ಕ ಅವರು ತಮ್ಮ ಇಬ್ಬರು ಮಕ್ಕಳಾದ ೧೦ ವರ್ಷದ ದೀಪಕ ಹಾಗೂ ೫ ವರ್ಷದ ದಿಯಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಭಟ್ಕಳದ ಗೊರಟೆ ಕಡೆಯಿಂದ ಸರ್ಪನಕಟ್ಟಾ ಕಡೆಗೆ ತೆರಳುತ್ತಿದ್ದರು. ಕೋಣಾರ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-೬೬ರಿಂದ ತಿರುಗಲು ಸೂಚಕ ದೀಪ (ಇಂಡಿಕೇಟರ್) ನೀಡಿ, ಹೆದ್ದಾರಿಯಲ್ಲಿನ ವಾಹನಗಳ ಸಂಚಾರ ಗಮನಿಸಿ ಬೈಕ್ ಅನ್ನು ನಿಧಾನವಾಗಿ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುಂದಾಪುರ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ ಕಾರನ್ನು ರಜತ ರಾಜು ಪೂಜಾರಿ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಡಿಕ್ಕಿಯ ಪರಿಣಾಮ ಬೈಕ್ ಸವಾರ ಈಶ್ವರ ನಾಯ್ಕ, ಅವರ ಪುತ್ರ ದೀಪಕ ಹಾಗೂ ಪುತ್ರಿ ದಿಯಾ ಅವರಿಗೆ ಗಾಯಗಳಾಗಿವೆ. ಗಾಯಗಳು ಸಾದಾ ಸ್ವರೂಪದ್ದಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :

೧೦ ಲಕ್ಷ ಗಿಡ ಬೆಳೆಸಿದ ಭಟ್ಕಳದ ಈ ವ್ಯಕ್ತಿಯ ಮುಂದಿನ ಗುರಿ ಏನು ಗೊತ್ತಾ? ಒಂದು ಕೋಟಿ!

ಭಟ್ಕಳ: ಯಕ್ಷ ಚೌಡೇಶ್ವರಿ ದೇವಸ್ಥಾನದಲ್ಲಿ ನಿನಾದ ಭಾವಗಾನ