ಭಟ್ಕಳ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೌಶಿಕ್ ನಾಯ್ಕ ಅವರು ಮನೆಯಲ್ಲಿದ್ದ ಸೀರೆಯ ಸಹಾಯದಿಂದ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಭಟ್ಕಳದ (Bhatkal) ಹೆಬಳೆ ಹೊನ್ನೆಗದ್ದೆಯಲ್ಲಿ ಕೌಶಿಕ್ ಸುಬ್ರಾಯ ನಾಯ್ಕ (18) ಅವರು ವಾಸವಾಗಿದ್ದರು. ಅವರು ವಿದ್ಯಾರ್ಥಿಯಾಗಿ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದರು. ಕೌಶಿಕ್ ನಾಯ್ಕ ಅವರ ತಂದೆ ಸುಬ್ರಾಯ ಬರವಯ್ಯ ನಾಯ್ಕ ಕೂಲಿ ಕಾರ್ಮಿಕರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶುಕ್ರವಾರ ಬೆಳಗ್ಗೆ ಬೇಗ ಎದ್ದ ಕೌಶಿಕ್ ನಾಯ್ಕ ತಮ್ಮ ಕೋಣೆಯಲ್ಲಿಯೇ ನೇಣಿಗೆ ಶರಣಾದರು. ಮನೆಯಲ್ಲಿದ್ದ ಸೀರೆ ಬಳಸಿ ಅವರು ಸೀಲಿಂಗ್ ಫ್ಯಾನಿಗೆ ನೇತಾಡಿದ್ದಾರೆ. ಮಗನ ಸಾವಿನ ಬಗ್ಗೆ ಸುಬ್ರಾಯ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಭಟ್ಕಳ (Bhatkal) ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Kantara actress/ ಭಟ್ಕಳಕ್ಕೆ ಕಾಂತಾರ ನಟಿ ಭೇಟಿ: ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ



