ಭಟ್ಕಳ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಚಿತ್ರಾಪುರ ಮಠದ ಆಡಳಿತದಲ್ಲಿ ನಡೆಯುತ್ತಿರುವ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಬುಧವಾರ ಶ್ರೀವಲ್ಲಿ ಸಾಹಿತ್ಯ ಸಂಘದಿಂದ (Srivalli Sahitya Sangha) ಗುರುಪೂರ್ಣಿಮೆ ಉತ್ಸವ ಆಚರಿಸಲಾಯಿತು (Guru Purnima Celebration).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಿದ್ಯಾರ್ಥಿಗಳು ಶ್ರೀ ಪರಿಜ್ಞಾನಾಶ್ರಮ ಹಾಗೂ ಶ್ರೀ ಸದ್ಯೋಜ್ಯಾತ ಶಂಕರಾಶ್ರಮ ಗುರುಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಪುಷ್ಪ ಅರ್ಚನೆ ಮಾಡಿ ನಂತರ ತಮ್ಮ ಶಾಲಾ ಶಿಕ್ಷಕರೆಲ್ಲರಿಗೆ ನಮನ ಸಲ್ಲಿಸಿದರು. ಎಂಟನೇ ತರಗತಿ ವಿದ್ಯಾರ್ಥಿನಿ ನಿನಾದ ಉಮೇಶ ನಾಯ್ಕ ನೇತೃತ್ವದಲ್ಲಿ ಗುರು ಮಹಿಮಾ ಗೀತೆಯನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು.

Rotary/ ರೋಟರಿ ಅಧ್ಯಕ್ಷರಾಗಿ ಶ್ರೀನಾಥ ಪೈ ಪದಗ್ರಹಣ 

ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಮಮತಾ ಭಟ್ಕಳ, ಹಿರಿಯ ಶಿಕ್ಷಕ ಸಂಜಯ ಗುಡಿಗಾರ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀವಲ್ಲಿ ಸಾಹಿತ್ಯ ಸಂಘದ ಸಂಸ್ಥಾಪಕ ಶಿಕ್ಷಕಿ ರೇಷ್ಮಾ ನಾಯಕ ಗುರುಪೂರ್ಣಿಮೆ (Guru Purnima) ಹಿನ್ನೆಲೆ, ವಿಶೇಷತೆ ಕುರಿತು ಪ್ರಾಸ್ತಾವಿಕವಾಗಿ ತಿಳಿಸಿ ಗುರುಗಳ ಕುರಿತಾದ ತಮ್ಮ ಸ್ವರಚಿತ ‘ದಿವ್ಯತೇಜರು’ ಕವಿತೆ ವಾಚಿಸಿ, ಸ್ವಾಗತಿಸಿದರು. ವೇದಿಕೆಯಲ್ಲಿ, ಶಿಕ್ಷಕರಾದ ಶ್ರೀಧರ ನಾಯ್ಕ, ನಾರಾಯಣ ನಾಯ್ಕ, ಕಾಂಚನಾ ಮೇಸ್ತ, ತ್ರೀವೇಣಿ ನಾಯ್ಕ, ಅಭಿಷೇಕ ನಾಯ್ಕ, ಧನ್ಯಾ ಕಡ್ಲೆ ಉಪಸ್ಥಿತರಿದ್ದರು.

Mari jatre/ ಅಮಟೆ ಮರಕ್ಕೆ ಕಂಪು; ಮಾರಿ ಮೂರ್ತಿ ತಯಾರಿಕೆಗೆ ಚಾಲನೆ