ಭಟ್ಕಳ: ಭಾರತ ಯಾವತ್ತಿದ್ರೂ ಹಿಂದೂ ರಾಷ್ಟ್ರ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಗುಡುಗಿದರು. ಅವರು ಇಲ್ಲಿನ ಹಿಂದು ಸಮ್ಮೇಳನ ಸಂಚಾಲನಾ ಸಮಿತಿಯ ಹೆಬಳೆ ಮಂಡಲದ ವತಿಯಿಂದ ಹಮ್ಮಿಕೊಂಡ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ (Hindu Samajotsava) ವಕ್ತಾರರಾಗಿ ಭಾಗವಹಿಸಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮ ಶತಾಬ್ದಿಯ ಪ್ರಯುಕ್ತ ಹಿಂದೂ ಸಂಘಟನೆ ಮತ್ತು ಹಿಂದೂ ಜಾಗೃತಿಗಾಗಿ ಹಿಂದೂ ಸಮಾಜವೇ ಈ ಹಿಂದೂ ಸಮಾಜೋತ್ಸವವನ್ನು ಮಾಡುತ್ತಿದೆ. ಆರೆಸ್ಸೆಸನ್ನು ಯಾರೆಷ್ಟೇ ಟೀಕಿಸಲಿ, ನಿಂದಿಸಲಿ ಆರೆಸ್ಸೆಸ್ ಮತ್ತೆಮತ್ತೆ ಬೆಳೆಯುತ್ತಿದೆ. ಜಗತ್ತಿನ ಮೂಲೆಮೂಲೆಗಳಲ್ಲಿ ವಾಸಿಸುವ ಹಿಂದೂಗಳ ಹೃದಯದಲ್ಲಿ, ಹಿಂದೂ ಸ್ವಾಭಿಮಾನವನ್ನು, ಹಿಂದೂ ಭಾವನೆಗಳನ್ನು ಬಡಿದು ಎಬ್ಬಿಸುವುದರ ಮೂಲಕ ಜಗತ್ತಿನ ಶಕ್ತಿಶಾಲಿ ಸಮಾಜ ಭಾರತದ ಹಿಂದೂ ಸಮಾಜ ಅನ್ನುವುದರ ಸಾಕ್ಷಾತ್ಕಾರವನ್ನು ಮಾಡಿ ತೋರಿಸಿದೆ. ಹಿಂದೂ ವಿರೋಧಿಗಳಿಗೆ ಈಗ ಗೊತ್ತಾಗಿದೆ. ಹಿಂದೂ ಸಮಾಜ ಸಂಘಟಿತವಾಗಿದೆ ಎಂದು. ಭಾರತ ಹಿಂದೂ ಸಮಾಜ ಎನ್ನುವುದನ್ನ ಜಗತ್ತೇ ಒಪ್ಪಿಕೊಂಡ ಸತ್ಯ. ಎಲ್ಲ ಮುಸ್ಲಿಂ ರಾಷ್ಟ್ರಗಳೂ ಕೂಡ ಭಾರತವನ್ನು ಹಿಂದೂಸ್ತಾನ ಅಂತಲೇ ಕರೆಯುವುದು. ಜಗತ್ತಿನ ಅತೀ ಶ್ರೀಮಂತ ಸಂಸ್ಕೃತಿಯ ವಾರಸುದಾರರು ನಾವು. ಸಿಂಧೂ ನಾಗರಿಕತೆಯ ಪಳೆಯುಳಿಕೆಗಳು ನಾವು’ ಎಂದು ಹೇಳಿದರು.

Bhatkal/ ಹೊನ್ನೆಗದ್ದೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ 

ಹುಬ್ಬಳ್ಳಿಯ ಶ್ರೀ ಮಾತಾ ಆಶ್ರಮದ ಮಾತಾಜೀ ತೇಜೋಮಹಿಯವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ‘ಅದೆಷ್ಟೋ ಆಕ್ರಮಣಗಳನ್ನು ತಡೆದುಕೊಂಡು ಮತ್ತೆಮತ್ತೆ ಮೇಲೇಳುತ್ತಿರುವ ರಾಷ್ಟ್ರವೆಂದರೆ ಅದು ನಮ್ಮ ಭಾರತ. ಅಂತಹ ಅದ್ಭುತ ದೇಶ ನಮ್ಮದು. ವಿವೇಕಾನಂದರು, ಶಿವಾಜಿಯಂತಹ ಶೂರ-ಧೀರ ಮಹಾಪುರುಷರನ್ನು ಕೊಟ್ಟ ದೇಶ, ಅದು ನಮ್ಮ ಭಾರತ. ಆ ರಕ್ತ ನಮ್ಮ ಹಿಂದೂಗಳದ್ದು. ನಾವೆಲ್ಲ ಹಿಂದೂಗಳು. ಭಾರತದ ನದಿಗಳ ನೀರನ್ನು ಯಾರೆಲ್ಲ ಕುಡಿಯುತ್ತಿದ್ದಾರೋ, ಭಾರತದ ನೆಲದ ಅನ್ನವನ್ನು ಯಾರೆಲ್ಲ ತಿನ್ನುತ್ತಿದ್ದಾರೋ, ಭಾರತದ ಗಾಳಿಯನ್ನು ಯಾರೆಲ್ಲಾ ಉಸಿರಾಡುತ್ತಿದ್ದಾರೋ ಅವರೆಲ್ಲಾ ಹಿಂದೂಗಳೇ… ಹಾಗಾಗಿ ಎಲ್ಲರೂ ಮಕ್ಕಳಲ್ಲಿ ಹಿಂದೂ ಸಂಸ್ಕಾರದ ಬೀಜಗಳನ್ನು ಬಿತ್ತಬೇಕು. ನಮ್ಮ ಹಿಂದೂ ಸಂಸ್ಕೃತಿಯನ್ನು ಕಲಿಸಿ, ಬೆಳೆಸಿ ಉಳಿಸಬೇಕಾಗಿದೆ. ನಮ್ಮ ಹಿಂದೂ ಧರ್ಮವನ್ನು ನಾವುಗಳೇ ರಕ್ಷಿಸಬೇಕಾಗಿದೆ. ಭಾರತ ಅಂತ ಬಂದಾಗ ನಾವೆಲ್ಲ ಹಿಂದೂಗಳು ಅನ್ನುವಂತಹದ್ದು ಮೊದಲು ಬರಬೇಕು’ ಎಂದು ನುಡಿದರು.

Kantara actress/ ಭಟ್ಕಳಕ್ಕೆ ಕಾಂತಾರ ನಟಿ ಭೇಟಿ: ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ 

ಸಮಿತಿಯ ಅಧ್ಯಕ್ಷ ರಾಮ ಹೆಬಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೆಯ ವರ್ಷದ ಸವಿನೆನಪಿಗಾಗಿ ಸಮಸ್ತ ಹಿಂದೂ ಸಮಾಜವೇ ಪಾಲ್ಗೊಂಡು ಆಚರಣೆ ಮಾಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಹಳ್ಳಿಗಳಲ್ಲೂ ಕೂಡ ಹಿಂದೂ ಸಮಾಜೋತ್ಸವ (Hindu Samajotsava) ಆಚರಣೆ ಮಾಡಲಾಗುತ್ತಿದೆ. ಹಿಂದೂಗಳ ಜಾಗೃತಿ ಮತ್ತು ಹಿಂದೂ ಧರ್ಮದ ರಕ್ಷಣೆ ಇದರ ಮೂಲ ಉದ್ದೇಶ. ಆರೆಸ್ಸೆಸನ್ನು ಬ್ಯಾನ್ ಮಾಡಲು ಅನೇಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಆರೆಸ್ಸೆಸ್ ಭಯೋತ್ಪಾದನೆಯನ್ನು ಯಾರಿಗೂ ಕಲಿಸುವುದಿಲ್ಲ. ಬದಲಾಗಿ ರಾಷ್ಟ್ರಪ್ರೇಮ, ಶಿಸ್ತು ಮತ್ತು ನಮ್ಮ ಧರ್ಮದ ರಕ್ಷಣೆಯ ಪಾಠ ಹೇಳಿಕೊಡುತ್ತೆ ‘ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು. ಕೇಶವ ಮೊಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

Youth arrested/ ಗಾಂಜಾ ಸೇವಿಸಿದ ತೆರ್ನಮಕ್ಕಿ ಯುವಕ ಬಂಧನ

ಇದಕ್ಕೂ ಮೊದಲು ಬೃಹತ್ ಶೋಭಾಯಾತ್ರೆ ನಡೆಯಿತು. ಹೆಬಳೆ ಗ್ರಾಮ ಪಂಚಾಯತಿಯ ಮುಂಭಾಗದಿಂದ ಪ್ರಾರಂಭವಾಗಿ ಗಾಂಧಿನಗರದ ಗಣೇಶ ಮೈದಾನದವರೆಗೂ ತಲುಪಲು ಸರಿಸುಮಾರು ಒಂದೂವರೆ ತಾಸಿನವರೆಗೂ ಬೃಹತ್ ಶೋಭಾಯಾತ್ರೆ ನಡೆಯಿತು. ಮಾತಾಭಗಿನಿಯರು ಪೂರ್ಣಕುಂಭ ಕಳಸದ ಜೊತೆ ಮಾತಾಜೀಯವರ ಮುಂಭಾಗದಲ್ಲಿ ಸ್ವಾಗತ ಕೋರುತ್ತಾ ಶಿಸ್ತುಬದ್ಧವಾಗಿ ನಡೆಯುತ್ತಿದ್ದರು. ಮಾತಾಜೀಯವರು ತೆರೆದ ವಾಹನ (ರಥ) ದಲ್ಲಿ ಕುಳಿತು ವಿರಾಜಮಾನರಾಗಿದ್ದರು. ಪುಟಾಣಿಗಳು ಭಜನೆಯ ಹಾಡುಗಳಿಗೆ ಕುಣಿಯುತ್ತಾ ತಮ್ಮ ಭಕ್ತಿಭಾವವನ್ನು ಪ್ರದರ್ಶಿಸಿದರು. ಚಂಡೆಯ ನಾದ ಮೈನವಿರೇಳಿಸುವಂತಿತ್ತು. ತಾಲೂಕಿನ ಹೆಮ್ಮೆಯ ಗೊಂಡರ ಡೆಕ್ಕೆ ಕುಣಿತ ಮನಸೂರೆಗೊಳ್ಳುವಂತಿತ್ತು. ಗ್ರಾಮದ ಪುರುಷರು ಮಹಿಳೆಯರು ಪುಟಾಣಿಗಳೆನ್ನದೇ ಸಮಸ್ತ ಹಿಂದೂ ಬಾಂಧವರು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತರು ಕೂಡ ಈ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Murudeshwar/ ಮುರ್ಡೇಶ್ವರ ಬೀಚ್‌ನಲ್ಲಿ ಪ್ರತಿ ದಿನ ಗಾಂಜಾ ಮಾರಾಟ

ಇಡೀ ಮಾರ್ಗ ಕೇಸರಿಮಯವಾಗಿತ್ತು. ಶೋಭಾಯಾತ್ರೆಯಲ್ಲಿ ಪುರುಷರು ಬಿಳಿ ಪಂಚೆ, ಶರ್ಟು, ಕೇಸರಿ ಶಾಲು ಹಾಗೂ ಕೇಸರಿ ಪೇಟ ಧರಿಸಿದರೆ, ಮಾತಾಭಗಿನಿಯರು ಶಿಸ್ತುಬದ್ಧವಾಗಿ ಸೀರೆಯಿಂದ ಕಂಗೊಳಿಸಿದರು. ಕುಣಿತ ಭಜನೆಯ ಪುಟಾಣಿಗಳು ಕೇಸರಿಯಿಂದ ಶೋಭಿಸುತ್ತಿದ್ದರು. ಬಂದಂತಹ ಎಲ್ಲರಿಗೂ ತಂಪು ಪಾನೀಯ, ಬಾಳೆಹಣ್ಣು ಮತ್ತು ಬನ್ ವ್ಯವಸ್ಥೆ ಮಾಡಲಾಗಿತ್ತು.

Holi celebration/ ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಹೋಳಿ ಸಂಭ್ರಮ

ಯೋಗಗುರು ಗೋವಿಂದ ದೇವಡಿಗರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು. ಸನ್ಮಾನಿತಗೊಳ್ಳಬೇಕಾಗಿದ್ದ ಹಿರಿಯ ಎಮ್ ವಿ ಹೆಬಳೆ ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿವಿಧ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಮಾಜಿ ಶಾಸಕ ಸುನೀಲ ನಾಯ್ಕ ಕಾರ್ಯಕ್ರಮಕ್ಕೆ ಬಂದು ಮಾತಾಜೀಯವರ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ, ಪ್ರಶಾಂತ ಕುಮಟಾ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಸುಬ್ರಹ್ಮಣ್ಯ ಕುಮಟಾ, ತಾಲೂಕು ಸಂಯೋಜಕ ಜಯಂತ ಬೆಣಂದೂರ ಹಾಗೂ ಗ್ರಾಮದ ಸಮಸ್ತ ಹಿಂದೂ ಬಾಂಧವರು ಭಾಗವಹಿಸಿದ್ದರು. ಸಮಿತಿಯ ಸಂಚಾಲಕ ನಾಗೇಶ ನಾಯ್ಕ, ಉಪಾಧ್ಯಕ್ಷ ಸುಬ್ರಾಯ ದೇವಡಿಗ, ಸರ್ವ ಸದಸ್ಯರು ಮತ್ತು ಹಿಂದೂ ಕಾರ್ಯಕರ್ತರು ಸಮಾಜೋತ್ಸವ ಯಶಸ್ವಿಯಾಗಲು ಸಹಕರಿಸಿದರು.

Bhatkal/ ಹೋಟೆಲ್‌ಗೆ ನುಗ್ಗಿ ಗಲಾಟೆ; ಒಬ್ಬನ ಮೇಲೆ ಹಲ್ಲೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗೌತಮಿ ಮತ್ತು ನಿಶಾ ಅವರಿಂದ ಭರತನಾಟ್ಯ ನಡೆಯಿತು. ದುರ್ಗಾದಾಸ ನಾಯ್ಕ ಪ್ರಾರ್ಥಿಸಿದರೆ, ಸಹನಾ ಹಾಗೂ ಸಂಗಡಿಗರು ವೈಯಕ್ತಿಕ ಗೀತೆ ಹಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ತುಳಸಿದಾಸ ದೇವಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ಗಣಪತಿ ಮೊಗೇರ ವಂದಿಸಿದರು. ನಿರೂಪಕ ತಿರುಮಲ ಭಟ್ಕಳ ಕಾರ್ಯಕ್ರಮ ನಿರ್ವಹಿಸಿದರು. ಧನರಾಜ ನಾಯ್ಕ ವಂದೇ ಮಾತರಂ ಗೀತೆ ಹಾಡಿದರು.

Arrested/ ಮುರುಡೇಶ್ವರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಭಟ್ಕಳದ ಮತ್ತೊಬ್ಬ ವ್ಯಕ್ತಿಯ ಬಂಧನ