ಭಟ್ಕಳ: ಶಿವಮೊಗ್ಗದಲ್ಲಿ ನಡೆದ ೬ ನೇ ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ (Karate tournament)-೨೦೨೫ರಲ್ಲಿ ಭಟ್ಕಳದ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆಯಲ್ಲಿ ಉತ್ತಮ ಸಾಧನೆ ಮೆರೆದು ಹಲವು ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕರಾಟೆ ಪಂದ್ಯಾವಳಿಯಲ್ಲಿ (Karate tournament) ನೇಪಾಳ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಟಾ ವಿಭಾಗದಲ್ಲಿ ದಿಶಾಂತ ಎಸ್ ನಾಯ್ಕ, ಜಯನಿ ಮೊಗೇರ, ತೇಜಸ್ ವಿ ನಾಯ್ಕ ಚಿನ್ನದ ಪದಕ ಪಡೆದಿದ್ದಾರೆ. ಭಾನ್ವಿ ಸಿ ನಾಯ್ಕ, ಶ್ರೇಯಾ ಎಸ್ ನಾಯ್ಕ, ಅನುಶ್ರೀ ವಿ ನಾಯ್ಕ ಕಂಚಿನ ಪದಕ ಪಡೆದರೆ, ಮಣಿಪ್ರಸಾದ ಎ ಶೆಟ್ಟಿ, ಪರಿನಾ ಆರ್ ನಾಯ್ಕ, ರಿಶಿಮಾ ಆರ್ ನಾಯ್ಕ, ಲಿಖಿತಾ ಆರ್ ಮೊಗೇರ, ಅಲಂಕೃತ ವಿ ನಾಯ್ಕ, ದಿಯಾ ಸಿ ನಾಯ್ಕ, ವೈದ್ರುತಿ ಪಿ ನಾಯಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Raksha Bandhan celebration/ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ
ಕುಮಿತೆ ವಿಭಾಗದಲ್ಲಿ ಭಾನ್ವಿ ಸಿ ನಾಯ್ಕ, ಲಿಖಿತಾ ನಾಯ್ಕ, ತೇಜಸ್ ವಿ ನಾಯ್ಕ, ಅಲಂಕೃತ ವಿ ನಾಯ್ಕ ಚಿನ್ನದ ಪದಕ, ಲಿಖಿತಾ ಆರ್ ಮೊಗೇರ, ಜಯನಿ ಎನ್ ಮೊಗೇರ ಬೆಳ್ಳಿ ಪದಕ, ಶ್ರೇಯಾ ನಾಯ್ಕ, ಅನುಶ್ರೀ ನಾಯ್ಕ ಕಂಚಿನ ಪದಕ ಗೆದ್ದು ಕೀರ್ತಿ ತಂದಿದ್ದಾರೆ. ಇವರಿಗೆ ಶೋಟೊಕಾನ್ ಸಂಸ್ಥೆಯ ಸುರೇಶ ಮೊಗೇರ, ಅರ್ಯನ್ ನಾಯ್ಕ, ರಾಜಶೇಖರ ಗೌಡ, ಪ್ರವೀಣ ಎಚ್ ಆರ್, ವಿನೋದ ಗೊಂಡ, ಮಂಜು ದೇವಾಡಿಗ, ನಿಖಿತಾ ಖಾರ್ವಿ, ಅಂಜಲಿ ಕಾಮತ ತರಬೇತಿ ನೀಡಿ ಪಂದ್ಯಾಟಕ್ಕೆ ಅಣಿಗೊಳಿಸಿದ್ದರು.
ಇದನ್ನೂ ಓದಿ: Kick Boxing/ ಬೆಂಗಳೂರಲ್ಲಿ ಭಟ್ಕಳದ ಮಕ್ಕಳ ಪದಕಗಳ ಬೇಟೆ, ರಾಷ್ಟ್ರಮಟಕ್ಕೆ ಆಯ್ಕೆ



