ಭಟ್ಕಳ: ಅಘನಾಶಿನಿ (Aghanashini) –ಬೇಡ್ತಿ (Bedthi) ನದಿ ತಿರುವು ವಿಚಾರದಲ್ಲಿ ಸಂಸದರ ಕುರಿತು ಸಚಿವ ಮಂಕಾಳ ವೈದ್ಯ (Mankal Vaidya) ನೀಡಿರುವ ಹೇಳಿಕೆ ಬಾಲಿಶತನದ ಪರಮಾವಧಿಯಾಗಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ (Outrage) ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ (Bhatkal) ಬಿಜೆಪಿ (BJP) ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಯೋಜನೆಗಳನ್ನು ಜಾರಿಗೆ ತರುವಾಗ ಅದು ಜನವಿರೋಧಿಯಾಗಿದ್ದರೆ ವಿರೋಧಿಸಲೇಬೇಕು. ಸಚಿವರು ಅಭಿವೃದ್ಧಿಯ ಹೆಸರಿನಲ್ಲಿ ಒಂದೂ ಸಾಧನೆ ಮಾಡಿಲ್ಲ. ಜನರ ಹಿತ ಕಾಪಾಡಬೇಕಾದವರು ಅರಿತು ಮಾತನಾಡಬೇಕು ಎಂದು ಕಿಡಿಕಾರಿದರು.

ಇದನ್ನು ಓದಿ: Bhatkal Food Festival/ ಬೆಂಗಳೂರು ಹೋಟೆಲ್‌ನಲ್ಲಿ ಭಟ್ಕಳ ಆಹಾರ ಉತ್ಸವ

ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ವಿ.ಬಿ. ಜಿರಾಮಜಿ ಕುರಿತು ನೀಡಿರುವ ಹೇಳಿಕೆ ಅಸಂಬದ್ಧ ಹಾಗೂ ಹೊಣೆಗಾರಿಕೆಯಿಲ್ಲದ್ದು ಎಂದು ಖಂಡಿಸಿದರು.

ಇದನ್ನು ಓದಿ: Sharavathi pumped storage/ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದ್ದೇನು? 

ಸಭೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ನಿಗಮ ಮಂಡಲದ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಮಂಕಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ರಾಜ್ಯ ಹಿಂದುಳಿದ ವರ್ಗಗಳ ಪ್ರತಿನಿಧಿ ರವಿ ನಾಯ್ಕ, ಮುಖಂಡರಾದ ಭಾಸ್ಕರ ಮೊಗೇರ ಮತ್ತು ರಾಜೇಶ ನಾಯ್ಕ ಹಾಜರಿದ್ದು, ಸರ್ಕಾರದ ವಿರುದ್ಧ ಆಕ್ರೋಶ (outrage) ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ನಿರೂಪಿಸಿದರು.

ವಿಡಿಯೋ ಸಹಿತ ಇದನ್ನು ಓದಿ: Ranginkatte/ ರಂಗಿನಕಟ್ಟೆ ಅಶ್ವತ್ಥ ಮರ ತೆರವು ಯಾವಾಗ ಗೊತ್ತಾ?