ಭಟ್ಕಳ: ತಾಲೂಕಿನ ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯ ಐವರು ರೌಡಿಗಳನ್ನು ೬ ತಿಂಗಳ ಅವಧಿಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊರಗಿನ ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ (deported).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಮುರ್ಡೇಶ್ವರ ಸುತ್ತಮುತ್ತ ಪ್ರದೇಶಗಳಲ್ಲಿ ನಿರಂತರವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಹಿನ್ನೆಲೆಯಲ್ಲಿ ಭಾಸ್ಕರ ಮಹಾದೇವ ನಾಯ್ಕ, ರಾಜು ಮಹಾದೇವ ನಾಯ್ಕ, ಕೇಶವ ಋತಿಕ ಮಹಾದೇವ ನಾಯ್ಕ, ಗಣೇಶ ಬಾಬು ನಾಯ್ಕ ಹಾಗೂ ಗಣೇಶ ಚಾಕ್ಲಿ ಜಯಂತ ನಾಯ್ಕ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಇವರ ಮೇಲೆ ರೌಡಿ ಶೀಟ್ ತೆರೆಯಲಾಗಿದ್ದು, ಪೊಲೀಸ್ ನಿಗಾದಲ್ಲಿದ್ದರೂ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದರಿಂದ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.
Body found/ ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ತಾಲೂಕು ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯವು ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ರ ಕಲಂ ೫೫(ಎ) ಮತ್ತು (ಬಿ) ಅಡಿಯಲ್ಲಿ ಏಪ್ರಿಲ್ ೨ರಂದು ಗಡಿಪಾರು ಆದೇಶ ಹೊರಡಿಸಿದೆ. ಆದೇಶದಂತೆ, ಭಾಸ್ಕರ ಮಹಾದೇವ ನಾಯ್ಕ ಅವರನ್ನು ಬಾಗಲಕೋಟೆ (Bagalkot) ಜಿಲ್ಲೆಯ ನವನಗರ ಠಾಣಾ ವ್ಯಾಪ್ತಿಗೆ, ರಾಜು ಮಹಾದೇವ ನಾಯ್ಕ ಅವರನ್ನು ಬೀದರ (Bidar) ಜಿಲ್ಲೆಯ ನ್ಯೂಟೌನ್ ಠಾಣಾ ವ್ಯಾಪ್ತಿಗೆ, ಕೇಶವ ಋತಿಕ ಮಹಾದೇವ ನಾಯ್ಕ ಅವರನ್ನು ಗದಗ (Gadag) ಜಿಲ್ಲೆಯ ಬೆಟಗೇರಿ ಠಾಣಾ ವ್ಯಾಪ್ತಿಗೆ, ಗಣೇಶ ಬಾಬು ನಾಯ್ಕ ಅವರನ್ನು ವಿಜಯಪುರ (Vijayapura) ಜಿಲ್ಲೆಯ ಗಾಂಧಿ ಚೌಕ್ ಠಾಣಾ ವ್ಯಾಪ್ತಿಗೆ ಹಾಗೂ ಗಣೇಶ ಚಾಕ್ಲಿ ಜಯಂತ ನಾಯ್ಕ ಅವರನ್ನು ಕಲಬುರಗಿ (Kalburgi) ಜಿಲ್ಲೆಯ ಚೌಕ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ (deported). ಮುರ್ಡೇಶ್ವರ ಪೊಲೀಸ್ ಠಾಣಾ ಸಿಬ್ಬಂದಿ ಆರೋಪಿಗಳನ್ನು ಸಂಬಂಧಿಸಿದ ಜಿಲ್ಲೆಗಳ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.



