ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ತಾ ಪಂ, ಜಿ ಪಂ ಕ್ಷೇತ್ರಗಳಿಗೆ ಸಂಬಂಧಿಸಿದ ಮೀಸಲಾತಿ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳನ್ನು ಸಾಮಾನ್ಯ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ.

ತಾ ಪಂ ಕ್ಷೇತ್ರಗಳು: ಬೇಲೂರು ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮೀಸಲಾತಿ ನೀಡಲಾಗಿದೆ. ಮಾವಳ್ಳಿ-೧ ಕ್ಷೇತ್ರ ಸಾಮಾನ್ಯ (ಮಹಿಳೆ) ವಿಭಾಗದಲ್ಲಿದ್ದರೆ, ಮಾವಳ್ಳಿ-೨ ಕ್ಷೇತ್ರಕ್ಕೆ ಅನುಸೂಚಿತ ಪಂಗಡ (ಮಹಿಳೆ) ಮೀಸಲಾತಿ ನಿಗದಿಪಡಿಸಲಾಗಿದೆ. ಕಾಯಿಣಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ (ಮಹಿಳೆ) ಮೀಸಲಾತಿ ನೀಡಲಾಗಿದೆ. ಬೆಂಗ್ರೆ ಕ್ಷೇತ್ರ ಸಾಮಾನ್ಯ (ಮಹಿಳೆ) ವಿಭಾಗದಲ್ಲಿದೆ. ಶಿರಾಲಿ, ಮುಟ್ಟಳ್ಳಿ ಹಾಗೂ ಮಾರುಕೇರಿ ಕ್ಷೇತ್ರಗಳು ಸಾಮಾನ್ಯ ವಿಭಾಗದಲ್ಲಿವೆ. ಬೆಳಕೆ ಕ್ಷೇತ್ರಕ್ಕೆ ಅನುಸೂಚಿತ ಜಾತಿ (ಮಹಿಳೆ) ಮೀಸಲಾತಿ ನೀಡಲಾಗಿದೆ.

ಜಿ ಪಂ ಕ್ಷೇತ್ರಗಳು: ಮಾವಳ್ಳಿ-೧ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಬ’ ಮೀಸಲಾತಿ, ಕಾಯಿಣಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ (ಮಹಿಳೆ) ಮೀಸಲಾತಿ, ಶಿರಾಲಿ ಕ್ಷೇತ್ರಕ್ಕೆ ಸಾಮಾನ್ಯ (ಮಹಿಳೆ) ಮೀಸಲಾತಿ, ಮುಟ್ಟಳ್ಳಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ (ಮಹಿಳೆ) ಮೀಸಲಾತಿ ಹಾಗೂ ಬೆಳಕೆ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮೀಸಲಾತಿ ನಮೂದಿಸಲಾಗಿದೆ.