ಭಟ್ಕಳ: ಚನ್ನಪಟ್ಟಣ ಹನುಮಂತ ದೇವರ ಪಲ್ಲಕ್ಕಿ ಉತ್ಸವ ವೇಳೆ ಕಲ್ಲು ಎಸೆದಿರುವ (stone pelting) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಘಟನೆ ನಡೆದ ಐದು ದಿನಗಳ ನಂತರ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ಲಿಖಿತ ದೂರು (complaint) ನೀಡಿದೆ. ಶ್ರೀ ರಾಮನವಮಿಯ ಪ್ರಯುಕ್ತ ಭಟ್ಕಳದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಶ್ರೀ ದೇವರ ಪಲ್ಲಕಿಯ ಮೇಲೆ ಕಲ್ಲು ಎಸೆತ ಮಾಡಿದವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಗುರುವಾರ ಸಂಜೆ ಡಿವೈಎಸ್ಪಿ ಕಚೇರಿಗೆ ಲಿಖಿತ ದೂರು (complaint) ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೂರಿನಲ್ಲಿ ಏನಿದೆ?: ಭಟ್ಕಳದ ನಗರ ಭಾಗದ ಪ್ರಮುಖ ದೇವಸ್ಥಾನವಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದ್ದು, ಕರ್ನಾಟಕ ಸರ್ಕಾರದ ಎ ಶ್ರೇಣಿ ದೇವಸ್ಥಾನಗಳಲ್ಲಿ ಒಂದಾಗಿದೆ. ಶ್ರೀ ರಾಮನವಮಿಯ ಪುಯುಕ್ತ ಸಂಪ್ರದಾಯದಂತೆ ಪ್ರತಿವರ್ಷ ಹತ್ತು ದಿನಗಳ ಕಾಲ ವಿವಿಧ ಗ್ರಾಮ ಹಾಗೂ ದೇವಸ್ಥಾನಗಳಿಗೆ ಶ್ರೀ ದೇವರ ಪಲ್ಲಕಿ ಮೆರವಣಿಗೆ ತೆರಳುವುದು. ಪೂಜೆ-ಪುರಸ್ಕಾರ ನಡೆಸುವುದು ಹಾಗೂ ಕೊನೆಯ ಎರಡು ದಿನಗಳಲ್ಲಿ ಪುಷ್ಪ ರಥೋತ್ಸವ ಮತ್ತು ಕೊನೆಯ ದಿನ ಬ್ರಹ್ಮ ರಥೋತ್ಸವವನ್ನು ಆಚರಿಸಲಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Life threatened/ ಸಾರಾಯಿಗೆ ಹಣ ಕೊಡದಿದ್ದಕ್ಕೆ ಹಲ್ಲೆ; ಜೀವ ಬೆದರಿಕೆ
ಈ ವರ್ಷವೂ ಸಹ ಶ್ರೀ ರಾಮನವಮಿಯ ಬ್ರಹ್ಮ ರಥೋತ್ಸವದ ಪ್ರಯುಕ್ತ ದಿನಾಂಕ: ೨೦-೩-೨೦೨೬ರಿಂದ ಸಂಪ್ರದಾಯದಂತೆ ಪಲ್ಲಕಿ ಮೆರವಣಿಗೆ ವಿವಿಧ ಗ್ರಾಮ ಮತ್ತು ದೇವಸ್ಥಾನಗಳಿಗೆ ತೆರಳುವುದು ಪ್ರಾರಂಭವಾಗಿದೆ. ದಿನಾಂಕ ೨೧-೦೩-೨೦೨೬ರಂದು ಶನಿವಾರ ಸಂಜೆ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಪಲ್ಲಕಿ ಮೆರವಣಿಗೆ ಮೂಢ ಭಟ್ಕಳದ ಕೇತಪೈ ದೇವಸ್ಥಾನ ತಲುಪಿ ಅಲ್ಲಿಂದ ಹಿಂದಿರುಗಿ ಗಜಾನನ ಸ್ಟ್ರೀಟ್ ಮಾರ್ಗವಾಗಿ ಸಂಚರಿಸುವಾಗ, ಸರಿಸುಮಾರು ಸಂಜೆ ೭.೩೦ ಗಂಟೆಯ ಸಮಯದಲ್ಲಿ, ರಸ್ತೆಯ ಪಕ್ಕದಲ್ಲಿರುವ ಗೌಸ್ ಎಂಬ ವ್ಯಕ್ತಿಯ ಕುಟುಂಬ ವಾಸಿಸುವ ಕಂಪೌಂಡ್ ಒಳಗಿನಿಂದ ಅನ್ಯ ಕೋಮಿನ ಕೆಲವು ಮಕ್ಕಳು ಪವಿತ್ರ ರಾಮನವಮಿಯ (Rama Navami) ಶ್ರೀ ದೇವರ ಮೂರ್ತಿ ಇರುವ ಪಲ್ಲಕಿಯ ಮೇಲೆ ಕಲ್ಲು ಎಸೆದು ಗೊಂದಲ ಸೃಷ್ಟಿಸುವ ಮೂಲಕ ಭಯ ಹುಟ್ಟಿಸಿ ಶಾಂತಿ ಭಂಗಕ್ಕೆ ಪ್ರಯತ್ನ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Jackfruit Mela/ ಭಟ್ಕಳದಲ್ಲಿ “ನಿತ್ಯ ಹಲಸು ಮೇಳ”ಕ್ಕೆ ಚಾಲನೆ
ಈ ಕುರಿತು ಅದೇ ದಿನ ನಗರ ಠಾಣೆಯ ಪೋಲೀಸ್ ಅಧಿಕಾರಿಗಳ ಗಮನಕ್ಕೆ ಮೌಖಿಕವಾಗಿ ತರಲಾಗಿತ್ತು. ಧಾರ್ಮಿಕ ಪೂಜಾ ವಿಧಿವಿಧಾನಗಳು ಹಾಗೂ ರಥೋತ್ಸವದ ಪೂರ್ವ ತಯಾರಿಗಳ ಕಾರಣ ಅದೇ ದಿನ ಲಿಖಿತ ದೂರನ್ನು ನೀಡಲು ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ. ಈ ಪ್ರಕರಣದಲ್ಲಿ ಕಲ್ಲು ಎಸೆದ ಮಕ್ಕಳ ಹಾಗೂ ಅವರ ಮನೆಯವರ ಬಗ್ಗೆ ಹಾಗೂ ಈ ಮಕ್ಕಳಿಗೆ ಮತಾಂಧತೆಯ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ಕುರಿತು ಸೂಕ್ತ ತನಿಖೆ ನಡೆಸಿ, ಶ್ರೀ ದೇವರ ಪಲ್ಲಕಿಯ ಮೇಲೆ ಕಲ್ಲು ಎಸೆದು ಧಾರ್ಮಿಕ ಭಾವನೆಗೆ ಧಕ್ಕೆ ತಂದು ಕೋಮು ಸೌಹಾರ್ದ ಹಾಗೂ ಶಾಂತಿ ಭಂಗಕ್ಕೆ ಕಾರಣವಾಗಲು ಯತ್ನಿಸಿರುವ ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.
elected/ ಗುರುಕೃಪಾ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
೧೯೯೩ರಲ್ಲೂ ಸಹ ರಥೋತ್ಸವದ ದಿನದಂದು ಅನ್ನಕೋಮಿನವರ ಮನೆಯಿಂದ ರಥದ ಮೇಲೆ ಕಲ್ಲು ಎಸೆತದಿಂದ ಭಟ್ಕಳದಲ್ಲಿ ಶಾಂತಿಭಂಗವಾಗಿ ದೀರ್ಘಕಾಲದವರೆಗೆ ಕೋಮು ಸಂಘರ್ಷ ನಡೆದಿರುವುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ರಥೋತ್ಸವದ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಕೋರಲಾಗಿದೆ.



