ಶಿವಮೊಗ್ಗ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಅಳ್ಳೆಕೋಡಿಯಲ್ಲಿ ಹೊಳೆಗೆ ಇಳಿದಿದ್ದ ೧೦ ಜನ ಅಮಾಯಕರು ಭೀಕರ ದುರಂತಕ್ಕೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರಿ ಸುದ್ದಿ (Bhatkal tragedy) ಕೇಳಿ ಶಿವಮೊಗ್ಗ (Shivamogga) ಸಂಸದ ಬಿ ವೈ ರಾಘವೇಂದ್ರ (B Y Raghavendra) ತೀವ್ರ ಸಂತಾಪ ಸೂಚಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ, ಸಮುದ್ರದ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಹೊಳೆಯಲ್ಲಿ ನೀರಿನ ಹರಿವು ದಿಢೀರನೆ ಹೆಚ್ಚಾಗಿ ಈ ದುರಂತ (Bhatkal tragedy) ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Bhatkal tragedy/ ಭಟ್ಕಳ ಸಂತ್ರಸ್ತರಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ
ಘಟನೆಯಲ್ಲಿ ಅಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿರುವ ಅವರು, ಮಲೆನಾಡು (Malnad) ಮತ್ತು ಕರಾವಳಿ (coastal) ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ನದಿ ಪಾತ್ರದ ನಿವಾಸಿಗಳು ನದಿ, ಹಳ್ಳ-ಕೊಳ್ಳಗಳಿಗೆ ಇಳಿಯುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ವಿನಂತಿಸಿದ್ದಾರೆ.
Bhatkal tragedy/ ಭಟ್ಕಳ ದುರಂತ: ಮೃತರ ಸಂಖ್ಯೆ ಹತ್ತಕ್ಕೆ ಏರಿಕೆ, ಒಬ್ಬರು ನಾಪತ್ತೆ, ಮೂವರು ಅಸ್ವಸ್ಥ



