ಭಟ್ಕಳ: ತಾಲೂಕಿನ ಅಳಿವೆಕೋಡಿ ಪಳ್ಳಿಹೊಳೆಯಲ್ಲಿ ರವಿವಾರ ಸಂಭವಿಸಿದ ದುರಂತದಲ್ಲಿ (Bhatkal tragedy) ಸಮುದ್ರದ ಭರತಕ್ಕೆ ಸಿಲುಕಿ ೧೦ ಮಂದಿ ದುರ್ಮರಣ ಹೊಂದಿದರೆ, ಒಬ್ಬರು ನಾಪತ್ತೆಯಾಗಿದ್ದು, ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಳಿವೆಕೋಡಿ ಸಮುದ್ರ ತೀರದ ಬಳಿಯ ಪಳ್ಳಿಹೊಳೆ ನದಿಯಲ್ಲಿ ಚಿಪ್ಪಿಕಲ್ಲು ತೆಗೆಯಲು ತೆರಳಿದ್ದ ಒಂದೇ ಕುಟುಂಬದ ೮ ಮಹಿಳೆಯರು ಸೇರಿದಂತೆ ಒಟ್ಟು ೧೦ ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಸಮುದ್ರದ ಭರತದಿಂದ ಬೆದರಿದ ಮಹಿಳೆಯರು ದಡ ಸೇರಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಗಂಡ ನಾಪತ್ತೆಯಾಗಿದ್ದು, ಹೆಂಡತಿ ಸಾವನ್ನಪ್ಪಿದ್ದಾರೆ (Bhatkal tragedy)

Chippikallu tragedy/ ಚಿಪ್ಪಿಕಲ್ಲು ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ

ಸಾರದಹೊಳೆಯ ಪಡುಶಿರಾಲಿಯ ಲಕ್ಷ್ಮಿ ಮಾದೇವ ನಾಯ್ಕ (೩೮), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಮ ನಾಯ್ಕ (೩೯), ಉಮೇಶ ಮಂಜುನಾಥ ನಾಯ್ಕ (೨೫), ಮಾಸ್ತಮ್ಮ ಮಂಜುನಾಥ ನಾಯ್ಕ (೪೩), ಲಕ್ಷ್ಮಿ ಅಣ್ಣಪ್ಪ ನಾಯ್ಕ (೪೪), ಮಾಲತಿ ಜಟ್ಟಪ್ಪ ನಾಯ್ಕ (೩೮), ಮಂಜಮ್ಮ ಗೊಯ್ದಾ ನಾಯ್ಕ (೫೦), ನಾಗರತ್ನ ಪರಮೇಶ್ವರ ನಾಯ್ಕ (೪೦) ಹಾಗೂ ಸಾರದಹೊಳೆಯ ಹೀರೆಹಿತ್ಲುವಿನ ಜ್ಯೋತಿ ನಾಗಪ್ಪ ನಾಯ್ಕ (೩೭) ಮೃತಪಟ್ಟಿದ್ದಾರೆ. ಪಡುಶಿರಾಲಿಯ ಮಾದೇವ ಬೈರಪ್ಪ ನಾಯ್ಕ (೫೨) ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ. ನಾಗರತ್ನ ಈಶ್ವರ ನಾಯ್ಕ, ಮಾದೇವಿ ನಾಯ್ಕ ಹಾಗೂ ಲಲಿತಾ ಜಗದೀಶ ನಾಯ್ಕ ಅಸ್ವಸ್ಥರಾಗಿದ್ದು, ಅವರನ್ನು ಉಡುಪಿ (Udupi) ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Terrible tragedy/ ಭಟ್ಕಳದಲ್ಲಿ ಭೀಕರ ದುರಂತ: ಎಂಟು ಜನರ ದುರ್ಮರಣ

ಘಟನಾ ಸ್ಥಳಕ್ಕೆ ಪೊಲೀಸರು, ಕರಾವಳಿ ಭದ್ರತಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈಶ್ವರ ಮಲ್ಪೆ  (Eshwar Malpe) ತಂಡ ಸ್ಥಳಕ್ಕೆ ಆಗಮಿಸಿದ್ದು, ಕತ್ತಲಲ್ಲೂ ಕಾರ್ಯಾಚರಣೆ ನಡೆಸುತ್ತಿದೆ.

Murinakatte/ ಮುರಿನಕಟ್ಟೆಗೆ ಮುಸ್ಲಿಮರಿಂದ ಹಾನಿ: ಹಿಂದೂಗಳಿಂದ ಠಾಣೆಗೆ ಮುತ್ತಿಗೆ