ಭಟ್ಕಳ: ಹೊಸದಾಗಿ ನಿರ್ಮಿತ ಮುರಿನಕಟ್ಟೆ (Murinakatte) ಹಾನಿ ಬೆನ್ನಲ್ಲೇ ಭಟ್ಕಳದಲ್ಲಿ (Bhatkal) ಉದ್ವಿಗ್ನ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ (Prohibitory order) ಜಾರಿಗೊಳಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಲಂ ೧೪೪ ಸಿಆರ್ಪಿಸಿ/೧೬೩ ಬಿಎನ್ಎಸ್ಎಸ್-೨೦೨೩ ಅನ್ವಯ ನಿಷೇಧಾಜ್ಞೆ (Prohibitory order) ಜಾರಿಯಾಗಿದೆ. ಈ ಕುರಿತು ಭಟ್ಕಳ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ ೨೫ರ ಬೆಳಿಗ್ಗೆ ೬ ಗಂಟೆಯಿಂದ ೨೭ರಂದು ಬೆಳಿಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

Murinakatte/ ಮುರಿನಕಟ್ಟೆಗೆ ಮುಸ್ಲಿಮರಿಂದ ಹಾನಿ: ಹಿಂದೂಗಳಿಂದ ಠಾಣೆಗೆ ಮುತ್ತಿಗೆ

ಆದ್ದರಿಂದ, ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Murinakatte/ ಮುರಿನಕಟ್ಟೆಗೆ ಹಾನಿ: ಭಟ್ಕಳ ಉದ್ವಿಘ್ನ