ಭಟ್ಕಳ: ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದ ೪೦೭ ವಾಹನವೊಂದು ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ (Car hit) ಘಟನೆ ಭಟ್ಕಳದಲ್ಲಿ (Bhatkal) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮ್ಯಾಂಗೋ ಫಾರ್ಮ ಹೆಗ್ಗೆಲ್ ನಿವಾಸಿ ಮೊಹಮ್ಮದ್ ಸಲೀಂ ಕೆ ಉಸ್ಮಾನ್ ಈ ಕುರಿತು ದೂರು ನೀಡಿದ್ದಾರೆ. ಚಿಕ್ಕಮಗಳೂರು (chikkamagaluru) ಮೂಲದ ಶಶಿಕಿರಣ ಮಹಾಂತೇಶ (೩೩) ಎಂಬುವರು ತಮ್ಮ ೪೦೭ ವಾಹನವನ್ನು ಹೊನ್ನಾವರ (Honnavar) ಕಡೆಯಿಂದ ಭಟ್ಕಳದತ್ತ (Bhatkal) ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಭಟ್ಕಳದ ಅನ್‌ಫಾಲ್ ಸೂಪರ್ ಮಾರ್ಕೆಟ್ ಎದುರಿನ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಮುಂದೆ ನಿಧಾನವಾಗಿ ಸಾಗುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ (Car hit) ಎನ್ನಲಾಗಿದೆ. ಅಪಘಾತದಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಈ ಕುರಿತು ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Scooty rider injured/ ನಿಯಂತ್ರಣ ತಪ್ಪಿ ಬಿದ್ದ ಸ್ಕೂಟಿ ಸವಾರಗೆ ಗಾಯ



