ಭಟ್ಕಳ: ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡ (Scooty rider injured) ಘಟನೆ ನಗರದ ರಂಗಿನಕಟ್ಟೆ ಸಮೀಪದ  ರಾಷ್ಟ್ರೀಯ ಹೆದ್ದಾರಿ (National Highway)-೬೬ರಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರಗದ್ದೆಯ ರಾಮನಮನೆ ನಿವಾಸಿ ರಾಘವೇಂದ್ರ ರಾಮ ನಾಯ್ಕ (೩೯) ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ. ಮಣ್ಕುಳಿಯ ರಘುನಾಥ ರಸ್ತೆ ನಿವಾಸಿ ದೇವಿದಾಸ ದುರ್ಗಪ್ಪ ನಾಯ್ಕ (೪೪) ಅವರು ಕಾರಗದ್ದೆಯಿಂದ ಮಣ್ಕುಳಿ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ರಂಗಿನಕಟ್ಟೆ ಸಮೀಪದ ಮಂಜು ಕಿರಾಣಿ ಅಂಗಡಿ ಎದುರಿನ ಎನ್‌ಎಚ್-೬೬ ರಸ್ತೆಯಲ್ಲಿ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಇದರಿಂದ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ದೇವಿದಾಸ ನಾಯ್ಕ ಅವರಿಗೆ ಗಂಭೀರ ಗಾಯಗಳಾಗಿದ್ದು (Scooty rider injured), ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Traffic route/ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಭಟ್ಕಳ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ