ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ(National Highway)–೬೬ರ ಹನೀಫಾಬಾದ್ ಕ್ರಾಸ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ  (road accident) ಬೈಕ್ ಸವಾರನೊಬ್ಬರು ಗಾಯಗೊಂಡಿರುವ (Laborer injured) ಘಟನೆ ವರದಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹನೀಫಾಬಾದ್ ಕ್ರಾಸ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬೈಕ್ ಸವಾರ, ಶಿರಾಲಿ ಕಡೆಯಿಂದ ಭಟ್ಕಳ (Bhatkal) ಶಹರದತ್ತ ಸಾಗುತ್ತಿದ್ದ ಟಿವಿಎಸ್ ಕನೆಕ್ಷನ್–೧೨೫ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇದನ್ನು ಓದಿ: car collision/ ಅತೀ ವೇಗದ ಕಾರು ಡಿಕ್ಕಿ: ಬೈಕ್ ಸವಾರ ಗಂಭೀರ

ಅಪಘಾತದಲ್ಲಿ ಟಿವಿಎಸ್ ಬೈಕ್ ಚಾಲಕ, ತೆರ್ನಮಕ್ಕಿಯ ನಿವಾಸಿ ಬಿಳಿಯಾ ತಂದೆ ಶನಿಯಾರ ನಾಯ್ಕ (೫೩) ಅವರಿಗೆ ಗಾಯಗಳಾಗಿದ್ದು(Laborer injured), ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: Online fraud/ ಭಟ್ಕಳದಲ್ಲಿ ಆನ್‌ಲೈನ್ ವಂಚನೆ – ೧.೫೫ ಲಕ್ಷ ಹಣ ವರ್ಗಾವಣೆ

ಘಟನೆಯ ಕುರಿತು ಗಾಯಾಳುವಿನ ಪುತ್ರಿ ಕುಮಾರಿ ಶ್ರಾವ್ಯ (೨೪) ಅವರು ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ (case filed). ದೂರಿನ ಆಧಾರದಲ್ಲಿ ಹೆಬಳೆ ತೆಂಗಿನಗುಂಡಿ ನಿವಾಸಿ ಅಬ್ದುಲ್ ಗನಿ ತಂದೆ ಅಲಿ ಸಾಹೇಬ್ ಪಾಟ್ಟರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಪ್ರವಾಸಿಗನ ರಕ್ಷಣೆ