ಭಟ್ಕಳ: ತಾಲೂಕಿನ ವೆಂಕಟಾಪುರದ ಕೆನರಾ ಬ್ಯಾಂಕ್ ಖಾತೆದಾರರೊಬ್ಬರಿಗೆ ಆನ್‌ಲೈನ್ ವಂಚನೆಯಿಂದ (Online fraud) ₹೧.೫೫ ಲಕ್ಷ ಹಣ ನಷ್ಟವಾದ ಘಟನೆ ವರದಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೆಬಳೆ ಗಾಂಧಿನಗರ ನಿವಾಸಿ ತುಳಸಿದಾಸ ತಂದೆ ಮಾಸ್ತಿ ಮೊಗೇರ ಅವರು ಭಟ್ಕಳ ವೆಂಕಟಾಪುರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಯಾರೋ ಆರೋಪಿತರು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಅವರ ಖಾತೆಯಿಂದ ಒಟ್ಟು ₹೧,೫೫,೦೦೦/- ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ (Online fraud).

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಪ್ರವಾಸಿಗನ ರಕ್ಷಣೆ

ಖಾತೆಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದ ತಕ್ಷಣ ಪೀಡಿತರು ಬ್ಯಾಂಕ್ ಹಾಗೂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: Drawing / ಶ್ರೀವಲಿಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ