ಭಟ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿದ್ಯಾಂಜಲಿ ಪಬ್ಲಿಕ್ ಶಾಲೆ, ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಗ್ಗಳಿಕೆಗೆ ಪಾತ್ರವಾಗಿದೆ (national award). ೨೦೨೬ನೇ ಸಾಲಿನ “ಟಾಪ್ ೫೦ ಫ್ಯೂಚರಿಸ್ಟಿಕ್ & ಪ್ರೋಗ್ರೆಸಿವ್ ಸ್ಕೂಲ್ಸ್ ಆಫ್ ಇಂಡಿಯಾ” ಪಟ್ಟಿಯಲ್ಲಿ ಶಾಲೆಗೆ ಸ್ಥಾನ ದೊರೆತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎಡುಮಿರರ್ ಇಂಟರ್ನ್ಯಾಷನಲ್ ಮ್ಯಾಗಜಿನ್ ಸಂಸ್ಥೆಯು, ನ್ಯಾಷನಲ್ ಸ್ಕೂಲ್ ಅವಾರ್ಡ್ ಮತ್ತು ಇಂಟರ್ನ್ಯಾಷನಲ್ ಎಜುಕೇಶನ್ ನೆಕ್ಸಸ್ ಸಂಸ್ಥೆಗಳ ಸಹಯೋಗದಲ್ಲಿ ನೀಡಿದೆ. ಶಿಕ್ಷಣದಲ್ಲಿ ನವೀನತೆ, ಗುಣಮಟ್ಟದ ಬೋಧನೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಭವಿಷ್ಯಮುಖಿ ಶಿಕ್ಷಣ ವಿಧಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಶಾಲೆಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ.

Devotional songs/ ಗುಣವಂತೆ ಶ್ರಿ ಶಂಭುಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆಯಲ್ಲಿ ಜನಮನ ಸೆಳೆದ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ

ಈ ಪ್ರಶಸ್ತಿಯನ್ನು ಶಾಲೆಯ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಟ್ರಸ್ಟಿ ರಮೇಶ ಖಾರ್ವಿ ಅವರು ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸ್ವೀಕರಿಸಿದ್ದಾರೆ.

Chinnara Mela/ ಭಟ್ಕಳದಲ್ಲಿ ಚಿಣ್ಣರ ಮೇಳ ಉದ್ಘಾಟನೆ 

ಶಾಲೆಯ ಪ್ರಗತಿಗೆ ಶಿಕ್ಷಕರ ಸಮರ್ಪಣೆ, ವಿದ್ಯಾರ್ಥಿಗಳ ಶ್ರಮ ಹಾಗೂ ಪೋಷಕರ ನಿರಂತರ ಸಹಕಾರ ಮುಖ್ಯ ಕಾರಣಗಳಾಗಿವೆ. ಕೇವಲ ೨ ವರ್ಷಗಳಲ್ಲಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿ (national award) ದೊರಕಿದ್ದು, ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಣ ಕ್ಷೇತ್ರದ ಮೇಲಿನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

taxi drivers/ ಭಟ್ಕಳ ಟ್ಯಾಕ್ಸಿ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಡಿ ವೈ ಎಸ್ ಪಿ ಕಚೇರಿಯಲ್ಲಿ ಸಭೆ