ಭಟ್ಕಳ: ಧ್ವಂಸಗೊಂಡ ಮುರಿನಕಟ್ಟೆ (Murinakatte)ಯನ್ನು ಪುನರ್ ನಿರ್ಮಿಸಲು ಮುಂದಾದ ಹಿಂದೂ ಕಾರ್ಯಕರ್ತರನ್ನು (Hindu activists) ಪೊಲೀಸರು ಮಧ್ಯರಾತ್ರಿ ವಶಕ್ಕೆ ಪಡೆದರು (police custody).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪೊಲೀಸ್ ಠಾಣೆಗೆ ಮಧ್ಯರಾತ್ರಿ ಹಿಂದೂ ಸಂಘಟನೆಯವರು ಕಟ್ಟೆ ಪುನರ್ ನಿರ್ಮಾಣ ಮಾಡುವಂತೆ ಮುತ್ತಿಗೆ ಹಾಕಿದ್ದರು. ಮುರಿನಕಟ್ಟೆ ಪುನರ್ ನಿರ್ಮಾಣಕ್ಕೆ ಪೊಲೀಸರು ಸ್ಪಷ್ಟ ಭರವಸೆ ನೀಡಲಿಲ್ಲ. ಇದರಿಂದ ಬೇಸತ್ತು ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು ಮುರಿನಕಟ್ಟೆಗೆ ತೆರಳಿ ಕಟ್ಟೆ ನಿರ್ಮಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ (police custody).
Prohibitory order/ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ
ಮಧ್ಯರಾತ್ರಿ ಮುರಿನಕಟ್ಟೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದೇವಿಯ ಶಕ್ತಿಪೀಠದ ಕಟ್ಟೆ ಮತ್ತೆ ಪುನರ್ ನಿರ್ಮಿಸಲು ಮುಂದಾದಾಗ ಪೊಲೀಸರು ೧೫ ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ನಂತರ ಅವರನ್ನು ಮುರುಡೇಶ್ವರ (Murudeshwara) ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಭಟ್ಕಳದ ಹಿಂದೂ ಸಮಾಜದ ಮುಖಂಡರು ಕಾರ್ಯಕರ್ತರನ್ನು ಬಿಡುಗಡೆಗಳಿಸಲು ಒತ್ತಾಯಿಸಿದರು. ನಂತರ ವಶದಲ್ಲಿದ್ದ ಹಿಂದೂ ಕಾರ್ಯಕರ್ತರನ್ನು ಭಟ್ಕಳ ಶಹರ ಠಾಣೆಗೆ ಕರೆತಂದು ಬಿಡಲಾಯಿತು.
Murinakatte/ ಮುರಿನಕಟ್ಟೆಗೆ ಮುಸ್ಲಿಮರಿಂದ ಹಾನಿ: ಹಿಂದೂಗಳಿಂದ ಠಾಣೆಗೆ ಮುತ್ತಿಗೆ



