ಭಟ್ಕಳ: ಜಸ್ಟ್ ಡೈವ್ ಸ್ಕೂಬಾ ಡೈವಿಂಗ್ ತಂಡದವರು (Just Dive) ನೇತ್ರಾಣಿ ದ್ವೀಪದಲ್ಲಿ (netrani Island) ಸ್ಕೂಬಾ ಡೈವಿಂಗ್ (scuba diving) ಮುಗಿಸಿ ಪುನಃ ಮರಳಿ ಬರುವ ವೇಳೆ ಮೀನುಗಾರಿಕೆ ಬಳಸುವ ಬಲೆಗೆ ಸಿಲುಕಿಕೊಂಡಿದ್ದ ಅಪರೂಪದ ಆಮೆಯನ್ನು (Rare turtle) ರಕ್ಷಣೆ ಮಾಡಿ ಪುನಃ ಸಮುದ್ರಕ್ಕೆ ಬಿಟ್ಟು ತಮ್ಮ ಮಾನವೀಯತೆ ಮೆರೆದಿದ್ದಾರೆ.
ಆಮೆ ರಕ್ಷಣೆಯ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರದ (Murdeshwar) ಜಸ್ಟ್ ಡೈವ್ ಸ್ಕೂಬಾ ಡೈವಿಂಗ್ ತಂಡ ಮುರುಡೇಶ್ವರಕ್ಕೆ ಬಂದ ಪ್ರವಾಸಿಗರನ್ನು ನೇತ್ರಾಣಿ ದ್ವೀಪಕ್ಕೆ ಸ್ಕೂಬಾ ಡೈವಿಂಗ್ ಗೆ ಕರೆದುಕೊಂಡು ಹೋಗಿ ಪುನಃ ಮರಳಿ ಮುರುಡೇಶ್ವರಕ್ಕೆ ಬರುವ ವೇಳೆ ಸಮುದ್ರದ ಮದ್ಯದಲ್ಲಿ ಅಪರೂಪದ ಆಮೆಯೊಂದು (Rare turtle) ಮೀನುಗಾರಿಗೆ ಬಳಸುವ ಬಲೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ ತಂಡ ತಕ್ಷಣ ಬೋಟ್ ನಿಲ್ಲಿಸಿ ಅಮೆಯನ್ನು ಹಿಡಿದು ಅದಕ್ಕೆ ಸಿಲುಕಿಕೊಂಡಿದ್ದ ಬಲೆಯನ್ನು ತೆಗದು ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ. ಇವರ ಈ ಕಾರ್ಯಯಕ್ಕೆ ಸ್ಕೂಬಾ ಡೈವಿಂಗ್ ಬಂದ ಪ್ರವಾಸಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



