ಹೊನ್ನಾವರ: ಇಲ್ಲಿನ ಅರೆಅಂಗಡಿಯಲ್ಲಿ ನಡೆದ ೧೨ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ನಿವೃತ್ತ ಶಿಕ್ಷಕ ಮಾರುತಿ ಗಣಪಯ್ಯ ನಾಯ್ಕ ಅವರಿಗೆ ಸನ್ಮಾನ ನೀಡಿ ಗೌರವಿಸಲಾಗಿದೆ (honoured).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಾರುತಿ ಜಿ ನಾಯ್ಕ ಅವರು ಹೊನ್ನಾವರ (Honnavar) ತಾಲೂಕಿನ ಹೆಗ್ಗಾರಿನ ದಿ ಗಣಪಯ್ಯ ನಾಯ್ಕ ಹಾಗೂ ದಿ ಈರಮ್ಮ ಅವರ ಕಿರಿಯ ಪುತ್ರರಾಗಿ, ಸರಳತೆ–ಸಂಸ್ಕಾರಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹನೀಯರು. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಶಿರಸಿ (Sirsi) ತಾಲೂಕಿನ ಬನವಾಸಿಯ (Banavasi) ಹೆಬ್ಬತ್ತಿಯಲ್ಲಿ ಸತತ ೨೮ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ಅಪರೂಪದ ನಿಷ್ಠೆ ಹಾಗೂ ಸೇವಾಭಾವದ ಪ್ರತೀಕವಾಗಿದೆ. ಶಿಕ್ಷಣವೆಂಬ ದೀಪವನ್ನು ಮಕ್ಕಳ ಮನಸ್ಸಿನಲ್ಲಿ ಬೆಳಗಿಸಿದ ಅವರು, ವೃತ್ತಿಯೆಡೆಗೆ ಶ್ರದ್ಧೆ, ಮಕ್ಕಳ ಮೇಲಿನ ಮಮತೆ, ಜನರೊಂದಿಗೆ ಪ್ರೀತಿ–ವಿಶ್ವಾಸದ ನಡವಳಿಕೆಯಿಂದಲೇ “ಜನ ಮೆಚ್ಚಿದ ಶಿಕ್ಷಕ” ಪ್ರಶಸ್ತಿಗೆ ಭಾಜನರಾದರು.

Rare turtle/ ಬಲೆಗೆ ಸಿಲುಕಿದ ಅಪರೂಪದ ಆಮೆ

ಶಿಕ್ಷಕರ ಸಂಘದಲ್ಲಿ ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿ ಸಂಘಟನಾ ಶಕ್ತಿಯನ್ನೂ, ಹೊಣೆಗಾರಿಕೆಯನ್ನೂ ತೋರಿದವರು. ಬನವಾಸಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ನಂತರ ಹೊನ್ನಾವರ ತಾಲೂಕಿನ ಹೆಗ್ಗಾರನಲ್ಲಿ ನೆಲೆಸಿರುವ ಮಾರುತಿ ನಾಯ್ಕ ಅವರ ಜೀವನಯಾನ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕನ್ನಡದ ನೆಲದ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ನೀಡಿರುವ ಗೌರವ ಸನ್ಮಾನವು (honoured) ಮಾರುತಿ ನಾಯ್ಕ ಅವರ ಬದ್ಧತೆಯ ಸೇವೆಗೆ, ಅರ್ಹತೆಗೆ ಸಂದ ಗೌರವವಾಗಿದೆ. ಇವರ ಕುಟುಂಬದಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡವರೇ ಹೆಚ್ಚು ಎಂಬುದು ವಿಶೇಷ.

Motivational camp/ ೬೨೫ಕ್ಕೆ ೬೨೫ ಅಂಕ ಪಡೆದರೆ ೧೦,೦೦೦ ರೂ!