ಭಟ್ಕಳ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೨೦೨೪-೨೫ನೇ ಸಾಲಿನ ೪೭೦೨ ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾಗಿರುವ ತಾಲೂಕಿನ ಮಾವಳ್ಳಿ-೨ ಗ್ರಾಮ ಪಂಚಾಯತ ಆಚಾರಿಕೆರೆಯಿಂದ ಬೈಲಹೊಳೆಕಟ್ಟೆವರೆಗೆ ಎಡದಂಡೆ ಹಾಗೂ ಬಲದಂಡೆಯ ಖರ್ಲಾಂಡ್ ನಿರ್ಮಾಣ ಕಾಮಗಾರಿಯ ಒಟ್ಟು ೧೯ ಕೋಟಿ ರೂ ಕಾಮಗಾರಿ ಮತ್ತು ವಿವಿಧ ಕಾಮಗಾರಿಯನ್ನು ಭಾನುವಾರದಂದು ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಉದ್ಘಾಟಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ (Mankal Vaidya), ‘ಬೈಲೂರಿನಲ್ಲಿ ಹುಟ್ಟಿದ್ದೇನೆ. ೨೫ ವರ್ಷ ಈ ಊರಿನಲ್ಲಿದ್ದೇನೆ. ಇದು ನನ್ನೂರು ಆಗಿದೆ. ನನ್ನ ರಾಜಕೀಯ ಹಾಗೂ ವ್ಯಾಪಾರ ವಹಿವಾಟಿಗೆ ಸಹಕರಿಸಿದ ಊರು ಹಾಗೂ ಊರಿನ ಜನರಾಗಿದ್ದಾರೆ. ಜಿಲ್ಲಾ ಪಂಚಾಯತ ಸದಸ್ಯನಿಂದ ಇಲ್ಲಿಯ ಸಚಿವನ ತನಕ ತಂದು ನಿಲ್ಲಿಸಿದ್ದೀರಿ. ಮಿನಿ ವಿಧಾನಸೌಧ, ಕೆಎಸ್ಆರ್ಟಿಸಿ ಡಿಪೋ ಆಗಿದೆ. ಅದೆಲ್ಲ ನನ್ನ‌ ಕಲ್ಪನೆಯಾದರೆ ಬಿಜೆಪಿಯವರು ಅದನ್ನು ಮಾರಿದರು ಎಂದರು.

Woman death/ ಮುರುಡೇಶ್ವರದ ಮಹಿಳೆ ಸಾವಿಗೆ ಹೊಟ್ಟೆನೋವು ಕಾರಣವಾಯ್ತು

ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಬರೆದುಕೊಳ್ಳಲಿ. ನನಗೆ ಜನರ ಹಾಗೂ ಕ್ಷೇತ್ರದ ಜನರ ಕೆಲಸ ಮಾಡುವದರಲ್ಲಿ ನಾನು ನಿರತನಾಗಿದ್ದೇನೆ. ಈ‌ ಭಾಗದ ಖಾರ್ಲಾಂಡ್ ನಿರ್ಮಾಣಕ್ಕಾಗಿ ಒಂದು ವರ್ಷ ಕಾದು ಇಲ್ಲಿನ ಜನರಿಗೂ ಸಹ ಅನೂಕೂಲ ಆಗುವಂತೆ ಮಾಡಿದ್ದೇವೆ. ನಾನು ಅಧಿಕಾರದಲ್ಲಿಲ್ಲದಿದ್ದರು ಸಹ ನಮ್ಮ‌ ಕೆಲಸ ಮಾತನಾಡಬೇಕು. ೪೦ ಕೋಟಿ ರೂ ಕೆಲಸ ಕಾಯ್ಕಿಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಡಿಯಲ್ಲಿ ಮಾಡಿದ್ದೇನೆ. ಜನರು ಇಂದು ನೀಡಿದ ಮನವಿಯನ್ನು ಸಾಕಾರಗೊಳಿಸುವ ಕೆಲಸ ಮಾಡಲಿದ್ದೇನೆ. ಕಾಯ್ಕಿಣಿಯಲ್ಲಿ ಪಿಯು ಕಾಲೇಜು ಬಿಡುಗಡೆ ಮಾಡಿದ್ದೇನೆ. ಅದರ ತಯಾರಿ ನಡೆಯುತ್ತಿದೆ ಎಂದು ಹೇಳಿದರು.

Admissions/ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭ

ಹೇಳುವವರು ಮೊದಲು ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ನಾನು ಜನರ ಹೃದಯದಲ್ಲಿ ಇರುವವನಾಗಿದ್ದರಿಂದ ನನಗೆ ಯಾವುದೇ ಭಯವಿಲ್ಲ. ಊರಿನ‌ ಶಾಲೆ ಹಾಗೂ ದೇವಸ್ಥಾನ ಅಭಿವೃದ್ಧಿ ಕಾಣಬೇಕು. ಎಲ್ಲರೂ ಶಿಕ್ಷಣ ಪಡೆದಲ್ಲಿ ಮಾತ್ರ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಾಧ್ಯ. ಸರಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ತರುವ ಶಕ್ತಿ ನನಗಿದೆ ಎಂದರು.

Alumni Reunion/ ಏ ೨೯ರಂದು ದಿ ನ್ಯೂ ಇಂಗ್ಲಿಷ್ ಶಾಲೆಯ ಹಳೇ ವಿದ್ಯಾರ್ಥಿಗಳ ಸಮಾಗಮ

ಈ ಸಂದರ್ಭದಲ್ಲಿ ಭಟ್ಕಳ (Bhatkal) ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಯ್ಕಿಣಿ ಪಂಚಾಯತ ಮಾಜಿ ಅಧ್ಯಕ್ಷ ರಾಜು ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ರಾಘವೇಂದ್ರ ಗೋಯ್ದಪ್ಪ ನಾಯ್ಕ, ಕುಪ್ಪಯ್ಯ ನಾಯ್ಕ ಮುಂತಾದವರು ಇದ್ದರು.

Murudeshwar/ ಮುರುಡೇಶ್ವರದಲ್ಲಿ ಸರ್ಕಾರಿ ಸಾರಿಗೆ ಬಸ್ಸಿಗೆ ಬೆಂಕಿ