ಭಟ್ಕಳ: ಅಂಜುಮನ್ ಪದವಿ ಕಾಲೇಜು ಮತ್ತು ಭಟ್ಕಳ ನಗರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಆತ್ಮರಕ್ಷಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಗರ ಠಾಣೆಯ ಪಿಎಸ್ ಐ ಕೋಕಿಲಾ ಅನೂಪ್ ತರಬೇತಿಗೆ ಚಾಲನೆ ನೀಡಿದರು. ನಂತರ ಮಾತನಾಡಿ ಆತ್ಮರಕ್ಷಣೆಯ ವಿವಿಧ ಅಂಶಗಳ ಕುರಿತು ತಮ್ಮ ಪರಿಣಿತಿಯನ್ನು ಹಂಚಿಕೊಂಡರು. ದೈಹಿಕ ಸ್ವರಕ್ಷಣೆ ಕುರಿತು ಮಾತನಾಡುತ್ತಾ, ದೈಹಿಕ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ತಂತ್ರಗಳು ಮತ್ತು ತಂತ್ರಗಳನ್ನು ವಿವರಿಸಿದರು. ಕಾಲೇಜು ವಿದ್ಯಾರ್ಥಿನಿಯರು ಅಭ್ಯಾಸದ ಜತೆಗೆ ಸರ್ವ ವಿಧದಲ್ಲೂ ಸಬಲೀಕರಣ ಸಾಧಿಸಬೇಕು. ಸಮಾಜದಲ್ಲಿರುವ ಇತರ ಮಹಿಳೆಯರಿಗೂ ಪ್ರೇರೇಪಿಸುವ ಹಾಗೂ ನೆರವು ನೀಡುವ ಕಾರ್ಯ ಮಾಡಬೇಕು ಎಂದರು. ನಂತರ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪಿಎಸ್ಐ ಕೋಕಿಲಾ ಅನೂಪ್ ಉತ್ತರ ನೀಡಿದರು.
ಇದನ್ನೂ ಓದಿ : ಮೇ ೨೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಪ್ರೊ.ಎ.ಆರ್.ರವರ ಕುರಾನ್ ಪಠಣದೊಂದಿಗೆ ಆತ್ಮರಕ್ಷಣಾ ಕಾರ್ಯಾಗಾರ ಆರಂಭಗೊಂಡಿತು. ಪ್ರಾಂಶುಪಾಲ ಮುಷ್ತಾಕ್ ಕೆ ಶೇಖ್ ಸ್ವಾಗತಿಸಿದರು. ಪ್ರೊ.ಮಹಮ್ಮದ್ ಗಾನಿಂ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ಇದನ್ನೂ ಓದಿ : ಕನ್ನಡದ ಕಾಶ್ಮೀರ – ಉಮೇಶ ಮುಂಡಳ್ಳಿಯವರ ಅಲ್ಬಮ್ ಗೀತೆ ಬಿಡುಗಡೆ