ಭಟ್ಕಳ: ಉಡುಪಿಯ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬೆಳಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಪನಕಟ್ಟೆಯ ವಾಸುಕಿ ಸೌಹಾರ್ದ ಸಹಕಾರಿ ಸಂಘ, ಮುಗುಳಿಕೋಣೆಯ ಭಟ್ಕಳ ತಾಲೂಕು ಗಾಣಿಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸೆಯ ಶಿಬಿರ ಯಶಸ್ವಿಯಾಗಿ ನಡೆಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಾಸುಕಿ ಸೌಹಾರ್ದ ಸಹಕಾರಿ ಸಂಘದ ಆರ್ಥಿಕ ಸಲಹೆಗಾರ ಸುಭಾಷ ಶೆಟ್ಟಿ, ಗ್ರಾಮೀಣ ಭಾಗದ ಜನರು ಸರ್ಕಾರದ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಆಸಕ್ತಿ ವಹಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಇದನ್ನೂ ಓದಿ : ಹಳೆಯ ಪಿಂಚಣಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಇಂದು ನಾವೆಲ್ಲರೂ ಒತ್ತಡದ ಜೀವನದಲ್ಲಿ ಮಾನಸಿಕ ನೆಮ್ಮದಿ ಇಲ್ಲದೇ ಜೀವನ ನಡೆಸುತ್ತಿದ್ದೇವೆ. ಇದಕ್ಕೆ ನಮ್ಮ ಅನಾರೋಗ್ಯಕರ ಜೀವನ ಶೈಲಿಯೇ ಕಾರಣವಾಗಿದೆ. ಆರೋಗ್ಯಕರ ಜೀವನ ಕ್ರಮದಿಂದ ಉತ್ತಮ ಆರೋಗ್ಯ ಪಡೆಯೋಣ. ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಕೊಂಡ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಮಾಜಿಕ ಸೇವೆಯಲ್ಲಿ ವಾಸುಕಿ ಸೌಹಾರ್ದ ಸಹಕಾರಿ ಸಂಘ ಯಾವತ್ತೂ ನಿಮ್ಮ ಜತೆ ಇರುತ್ತದೆ. ಇವತ್ತಿನ ಕಾರ್ಯಕ್ರಮದ ಎಲ್ಲಾ ವೆಚ್ಚದ ಜತೆಗೆ ಅಗತ್ಯವಿರುವವರಿಗೆ ಕನ್ನಡಕದ ವೆಚ್ಚವನ್ನು ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಸಾಗರ

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ, ಬೆಳಕೆ ಗ್ರಾಮ ಪಂಚಾಯತ ಅಧ್ಯಕ್ಷ ಜಗದೀಶ ನಾಯ್ಕ ಮಾತನಾಡಿ, ಇಂದಿನ ದಿನಗಳಲ್ಲಿ ಅತಿ ಹೆಚ್ಚಿನ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಪಡೆಯದೆ ನಿರ್ಲಕ್ಷದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಣ್ಣು ಮಾನವನ ಜೀವನದ ಪ್ರಮುಖ ಅಂಗವಾಗಿದೆ ಇಂತಹ ಆರೋಗ್ಯ ಶಿಬಿರದಿಂದ ಉತ್ತಮ ಚಿಕಿತ್ಸೆ ಪಡೆಯಿರಿ ಎಂದರು.

ಇದನ್ನೂ ಓದಿ : ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನದ ಗರ್ಭಗುಡಿ ಕುಸಿತ

ಕಾರ್ಯಕ್ರಮದ ಮುಖ್ಯ ಅತಿಥಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಮಾತನಾಡಿ, ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆಯ ಶಿಬಿರವನ್ನು ಬೆಳಕೆಯಂತಹ ಗ್ರಾಮೀಣ ಭಾಗದಲ್ಲಿ ಆಯೋಜಿಸುತ್ತಿರುವುದು ಒಂದು ಉತ್ತಮ ಸಾಮಾಜಿಕ ಕಾರ್ಯಕ್ರಮ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಾಗ ಇನ್ನಷ್ಟು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲು ಸಹಕಾರಿಯಾಗುತ್ತದೆ. ಹಾಗೆಯೇ ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಹರಮ್ ಸುಲ್ತಾನಾ ಎನ್. ಅವರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ ಆಸ್ಪತ್ರೆ ಬಹಳಷ್ಟು ಅಭಿವೃದ್ಧಿ ಹೊಂದಿದೆ ಎಂದರು.

ಇದನ್ನೂ ಓದಿ : ಜುಲೈ ೬ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಹರಮ್ ಸುಲ್ತಾನಾ ಎನ್. ಮಾತನಾಡಿ, ಈ ಭಾಗದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಒಂದು ಒಳ್ಳೆಯ ಅವಕಾಶವಾಗಿದೆ. ಇವತ್ತು ೧೩೦ ಕ್ಕೂ ಹೆಚ್ಚಿನ ಜನರು ಹೆಸರನ್ನು ನೋಂದಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪ್ರಸಾದ ನೇತ್ರಾಲಯದ ಮೋಹನ ಇವರು ಕಣ್ಣಿನ ಸಂರಕ್ಷಣೆಯ ಬಗ್ಗೆ, ಉಚಿತ ಶಸ್ತ್ರ ಚಿಕಿತ್ಸೆಯ ವಿವರಗಳನ್ನು, ಹಾಗೂ ಸೌಲಭ್ಯಗಳ ಮಾಹಿತಿಯನ್ನು ಕೊಟ್ಟರು.

ಇದನ್ನೂ ಓದಿ : ರೈಲಿನಲ್ಲಿ ಮಹಿಳೆಯ ಆಪಲ್ ಮೊಬೈಲ್ ಫೋನ್ ಕಳ್ಳತನ

ವೇದಿಕೆಯಲ್ಲಿ ಪ್ರಸಾದ ನೇತ್ರಾಲಯದ ವೈದ್ಯ ಅಹನಾ ಎಫ್., ನೇತ್ರ ತಜ್ಞ ಇರ್ಫಾನ್, ಗಾಣಿಗ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗಜಾನನ ಶೆಟ್ಟಿ, ಎಂ.ಆರ್. ಮುರ್ಡೇಶ್ವರ, ಕಾರ್ಯದರ್ಶಿ ಮನೋಜ ಶೆಟ್ಟಿ, ರಾಜೇಶ ಅಗ್ಲಹೋಳೆ, ವಾಸುಕಿ ಸೌಹಾರ್ದ ನಿರ್ದೇಶಕ ಜಯಾ ಅಡಿಗ, ಗಣಪತಿ, ಆಶಾ ಶೆಟ್ಟಿ, ವಾಸುಕಿ ಸೌಹಾರ್ದ ವ್ಯವಸ್ಥಾಪಕ ಕಿಶನ ಶೆಟ್ಟಿ, ಸಿಬ್ಬಂದಿ ವರ್ಗ, ಪ್ರಸಾದ ನೇತ್ರಾಲಯದ ಸಿಬ್ಬಂದಿ ವರ್ಗ, ಶೃತಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಚೈತನ್ಯ, ಶ್ವೇತಾ ಉಪಸ್ಥಿತಿತರದ್ದರು. ದೀಪಾ ಸಂಗಡಿಗರು ಪ್ರಾರ್ಥಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ನಾಗಶ್ರೀ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.